ಇಂಗ್ಲೆಂಡ್‌‌ ಟೂರ್‌‌ಗೆ ಶೇ.100ರಷ್ಟು ಫಿಟ್‌ ಆಗಿರುವೆ: ಕ್ಯಾಪ್ಟನ್‌ ವಿರಾಟ್‌‌ ಕೊಹ್ಲಿ

ಮುಂಬೈ:ಜೂ-೨೨: ಇಂಗ್ಲೆಂಡ್‌‌ ಟೂರ್‌‌ಗೆ ಶೇ.100ರಷ್ಟು ಫಿಟ್‌ ಆಗಿದ್ದು, ಕುತ್ತಿಗೆ ನೋವು ಸಂಪೂರ್ಣವಾಗಿ ಗುಣಮುಖವಾಗಿದ್ದು, ಈಗಾಗಲೇ ಮುಂಬೈನಲ್ಲಿ 6-7 ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿರುವೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌‌ ಕೊಹ್ಲಿ ಹೇಳಿದ್ದಾರೆ.

ಮುಂಬರುವ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಟೂರ್‌ಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೊಹ್ಲಿ, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿರುವುದು ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ. ಮೈದಾನದಲ್ಲಿ ಆಡಲು ಉತ್ಸುಕನಾಗಿರುವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ತಂಡದಲ್ಲಿ ನಾನು ಯಾವ ರೀತಿ ಪ್ರದರ್ಶನ ನೀಡುತ್ತೇನೆ ಎಂಬುದು ಮುಖ್ಯವಾಗುವುದಿಲ್ಲ. ಇಡೀ ಟೂರ್‌ನಲ್ಲಿ ಏಕೈಕ ಪ್ಲೇಯರ್‌ ಉತ್ತಮ ಪ್ರದರ್ಶನ ನೀಡುವುದು ಅಸಾಧ್ಯ. ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಉದ್ದೇಶ. ನಮ್ಮ ಗಮನ ಉತ್ತಮ ಪ್ರದರ್ಶನ ನೀಡುವುದಾಗಿದೆ ಎಂದು ತಿಳಿಸಿದರು.

I’m 100 percent fit,looking forward to the England tour, Virat Kohli

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ