ಬದಲಾಗದ ಖಾತೆ: ಷರತ್ತಿನೊಂದಿಗೆ ಉನ್ನತ ಶಿಕ್ಷಣ ಒಪ್ಪಿದ ಜಿ.ಟಿ ದೇವೇಗೌಡ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅಂತಿಮವಾಗಿ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳಲು ಒಪ್ಪಿದ್ದಾರೆ.

ಈ ಮೊದಲು ಉನ್ನತ ಶಿಕ್ಷಣ ತಮಗೆ ಬೇಡ, ಬೇರೆ ಖಾತೆ ನೀಡಿ ಎಂದು ಜಿಟಿಡಿ ಮನವಿ ಮಾಡಿದ್ದರು,  ಆದರೆ ಖಾತೆ ಬದಲಾವಣೆಗೆ ಸಿಎಂ ಕುಮಾರ ಸ್ವಾಮಿ ಒಪ್ಪಿರಲಿಲ್ಲ.

ಗುರುವಾರ ಜಿ.ಟಿ ದೇವೇಗೌಡ ಅವರನ್ನು ಭೇಟಿ ಮಾಡಿದ ಕುಮಾರ ಸ್ವಾಮಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ, ಶುಕ್ರವಾರ ಚಾರ್ಜ್ ತೆಗೆದುಕೊಳ್ಳುವುದಾಗಿ ಜಿಟಿಡಿ ತಿಳಿಸಿದ್ದಾರೆ.

ಆದರೆ ಉನ್ನತ ಶಿಕ್ಷಣ ಖಾತೆ ವಹಿಸಿಕೊಳ್ಳಲು ಜಿಟಿಡಿ ಷರತ್ತು ವಿಧಿಸಿದ್ದಾರೆ. ಮೈಸೂರು ವಿವಿ ಮಾಜಿ ಉಪ ಕುಲಪತಿ ಹಾಗೂ ಎಚ್.ಡಿ ದೇವೇಗೌಡರ ಸಂಬಂಧಿಯಾಗಿರುವ ಪ್ರೊ.ಕೆ.ಎಸ್ ರಂಗಪ್ಪ ತಮ್ಮ ಖಾತೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು, ಮೂಗು ತೂರಿಸಬಾರದು ಎಂಬ ಷರತ್ತು ಹಾಕಿದ್ದು, ಈ ಷರತ್ತಿಗೆ ಸಿಎಂ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ