ಸಚಿವ ಡಿಕೆಶಿಗೆ ಸಂಕಷ್ಟ; ಕೋರ್ಟ್ ಗೆ ದೂರು ನೀಡಿದ ಐಟಿ !

ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಸಚಿವ ಡಿಕೆ ಶಿವಕುಮಾರ್ ಅವರು ಸಂಕಷ್ಟಗಳ ಮೇಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಕೋರ್ಟ್ ಗೆ ಗುಪ್ತವಾಗಿ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಂಪ್ಲೇಂಟ್ ನಲ್ಲೇನಿದೆ?:
ಹಣ ಸಾಗಾಟ ಮಾಡುವುದಕ್ಕಾಗಿಯೇ ಶಿವಕುಮಾರ್ ದೊಡ್ಡ ತಂಡವೊಂದನ್ನು ಕಟ್ಟಿದ್ದರು. ಆಪ್ತರು ಎನ್ನಿಸಿಕೊಂಡವರೆಲ್ಲಾ ಹಣ ಸಾಗಾಟ ಮಾಡುವುದಕ್ಕಾಗಿಯೇ ಇದ್ದವರಾಗಿದ್ದಾರೆ.  ಈ ತಂಡ ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡುತ್ತಿತ್ತು. ಅಲ್ಲದೇ ಡಿಕೆಶಿ ಮತ್ತು ತಂಡದ ಮೂಲಕವೇ ಕರ್ನಾಟಕದಿಂದ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗುತ್ತಿತ್ತು. ಸಾಕಷ್ಟು ವರ್ಷದಿಂದ ಇದನ್ನು ಮಾಡ್ತಾ ಇದ್ದಿದ್ದು ನಿಜ. ಸರ್ಕಾರಕ್ಕೆ ಈ ತಂಡದ ಮೂಲಕವೇ ತೆರಿಗೆ ವಂಚನೆ ಆಗುತ್ತಿತ್ತು ಎಂದು ಕೋರ್ಟ್ ಗೆ ಕೊಟ್ಟ ದೂರಿನಲ್ಲಿ ಐಟಿ ಅಧಿಕೃತವಾಗಿ ತಿಳಿಸಿದೆ.

ರೆಸಾರ್ಟ್ ನಲ್ಲಿ ಚೀಟಿ ಹರಿದು ರಾಜೇಂದ್ರನೇ ಗೊತ್ತಿಲ್ಲ ಎಂದು ಹೇಳಿದ್ದರು. ಅಲ್ಲದೇ ರಾಜೇಂದ್ರನಿಗು ನನಗೂ ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲವೆಂದೂ ಹೇಳಿದ್ದರು. ಆದರೆ ಚೀಟಿಯಲ್ಲಿ ರಾಜೇಂದ್ರ-3 “ಡ್ಯೂ” ಅಂತ ಡಿಕೆಶಿ ಬರೆದಿದ್ದರು. ಇದರಿಂದ ಬಲವಾದ ಸಾಕ್ಷಿಯಿದೆ. ಡಿಕೆಶಿ ಕಾಲಾವಕಾಶ ಪಡೆದು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ