ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಗೊತ್ತಿದೆ: ಡಿಕೆಶಿ

ಬೆಂಗಳೂರು: ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಗೊತ್ತಿದೆ. ಬೇರೆಯವರ ಮನೆಯಲ್ಲಿ ಡೈರಿ, ಲೆಕ್ಕ ಇಟ್ಟಿದ್ದು ಗೊತ್ತಿಲ್ಲವೇ, ಅಂಥವರ ಮೇಲೆ ಯಾಕೆ ದಾಳಿ ಮಾಡುವುದಿಲ್ಲ ಎಂದು ಸಚಿವ ಡಿಕೆಶಿ ಪ್ರಶ್ನಿಸಿದ್ದಾರೆ.
ಆರ್ಥಿಕ ಅಪರಾಧ ನ್ಯಾಯಾಲಯದಿಂದ ಮತ್ತೆ ಸಮನ್ಸ್ ಬಂದಿರುವುದಕ್ಕೆ ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ನನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಂಬಂಧಿಕರು, ಆಪ್ತರಿಗೂ ಕಿರುಕುಳ ಕೊಡುತ್ತಿದ್ದಾರೆ. ಹೀಗೆಲ್ಲ ಯಾಕೆ ಮಾಡುತ್ತಿದ್ದಾರೆ ಅಂತ ಗೊತ್ತಿದೆ. ನಾನು ಈಗ ಮಾತನಾಡುವುದಿಲ್ಲ, ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
ಈಗ ವಿಚಾರಣೆಗೆ ಹಾಜರಾಗಿ ಅಂತ ನೋಟಿಸ್‌ ಬಂದಿದೆ . ಆದರೆ ಯಾವುದೇ ಸಮನ್ಸ್ ಬಂದಿಲ್ಲ, ನಿಮಗೆ ಏನು ಅನ್ನಿಸುತ್ತದೆ ಅದನ್ನು ನೀವು ಮಾಡಿ. ಅವರಿಗೆ ಏನು ಅನಿಸುತ್ತದೆ ಅದನ್ನು ಅವರು ಮಾಡುತ್ತಾರೆ. ಕೊನೆಗೆ ದೇಶ ಕಾನೂನು ಇದೆ. ಕಾನೂನು ಮೂಲಕ ಹೋರಾಟ ಮಾಡುವುದು ಗೊತ್ತಿದೆ ಎಂದು ಡಿಕೆಶಿ ಹೇಳಿದರು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ