ಶಿರಸಿ :
ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪ್ರಧಾನ ಸಮಾರಂಭ ನಡೆಯಿತು. ಕು.ಜಯಲಕ್ಷ್ಮೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವಳು ವಿಶ್ವವಿದ್ಯಾಲಯಕ್ಕೆ 3 ನೇ ರಾಂಕ್ ಪಡೆದು ಸಾಧನೆ ಮಾಡಿರುತ್ತಾಳೆ.
ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯ ಹೈಕೋಟ ನ್ಯಾಯಾಧೀಶರಾದ ಕೆ ಎನ್ ಫಣೀಂದ್ರರವರು,ಜಿಲ್ಲಾ ನ್ಯಾಯಾಧೀಶರಾದ ಸುರೇಶ ವಂಟಿಗೋಡಿಯವರು ರಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಕೆ ಎಸ ಸುರೇಶ ಹಾಗೂ ಕಾಲೇಜಿನ ಸಿಬ್ಬಂದಿಗಳು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.