ನೀವು ಅಮ್ಲಪಿತ್ತದಿಂದ ಬಹಳ ದಿನದಿಮದ ಬಳಲುತ್ತಿದ್ದೀರ? ಹಾಗಿದಲ್ಲಿ ಈ ಕೆಳಗಿನ ಮನೆಮದ್ದನ್ನು ಸುಲಭವಾಗಿ ನೀವು ಕಡಿಮೆ ಖರ್ಚಿನಿಂದ ತಯಾರಿಸಬಹುದು ಹಾಗು ಅಮ್ಲಪಿತ್ತದಿಂದ ಪರಿಹಾರವನ್ನು ಪಡೆದುಕೂಳ್ಲಬಹುದು.
ಲೋಳೆರಸ – ಲೋಳೆರಸದ ಹಸಿರು ಭಾಗವನ್ನು ತೆಗೆದು, ಒಳಗಿರುವ ಬಿಳಿಯ ಭಾಗದೊಂದಗೆ ಜ್ಯುಸನ್ನು ತಯಾರಿಸಿ 20 ಎಮ್.ಎಲ್ ಲಿಗೆ 40 ಎಮ್.ಎಲ್ ನೀರನ್ನು ಬೆರಸಿ ಬೇಳಿಗೆ ಮಧ್ಯಾನ ಊಟದ ಮೋದಲು ಸೇವಿಸ ಬೇಕು.
ಬೇಟ್ಟದ ನೇಲಿಕಾಯಿ – 20-30 ಎಮ್.ಎಲ್ ಜ್ಯೂಸನ್ನು 40 ಎಮ್.ಎಲ್ ನೀರಿನಲ್ಲಿ ಬೆರಸಿ ಬೆಳಗೆ ಕಾಲಿ ಹೂಟ್ಟೆಯಲ್ಲಿ ಸೇವಿಸುವುದರಿಂದ ಎದೆಉರಿ ಕಡಿಮೇಯಾಗುತ್ತದೆ ಹಾಗು ಹೂಟ್ಟೆಯಲ್ಲಿ ಹುಣ್ಣುಇದ್ದಲಿ ನಿವಾರಣೆಯಾಗುತ್ತದೆ.
ದನಿಯ – 1-2 ಚಮಚ ದನಿಯ 250 ಎಮ.ಎಲ್ ನೀರಿನಲ್ಲಿ ರಾತ್ರಿ ನೇನಸಿ,ಬೆಳಗೆ ಅದನ್ನು ಚೆನ್ನಾಗಿ ಕುದಿಸಿ ನಂತರ ಶೋಧಿಸಿ,ಬೆಳಗೆ ಕಾಲಿ ಹೋಟ್ಟೆಯಲ್ಲಿ ಈ ಕಷಾಯವನ್ನು ಕುಡಿಯುವುದರಿಂದ ಎದೆನೋವು,ಅಮ್ಲೋದ್ಗಾರ ಕಡಿಮೇಯಾಗುತ್ತದೆ.
ಕೊತ್ತಂಬರಿ ಸೂಪ್ಪು -ಕೊತ್ತಂಬರಿ ಸೊಪ್ಪಿನಿಂದ ಮಾಡಿದ ಜ್ಯೂಸನ್ನು 15 ಎಮ.ಎಲ್ ಸೇವನೆ ಇಂದ ಅಮ್ಲಪಿತ್ತದಿಂದ ಆಗುವ ಎದೆಉರಿ,ಹೋಟ್ಟೆ ಉರಿ ನಿವಾರಣೆಯಾಗುತ್ತದೆ.
ದಾಳಿಂಬೆ– ಪ್ರತಿನಿತ್ಯ 30 ಎಮ್.ಎಲ್ ದಾಳಿಂಬೆ ಜ್ಯೂಸನ್ನು ಸೇವಿಸುತ್ತ ಬಂದಲ್ಲಿ ಅಮ್ಲಪಿತ್ತ ಕಡಿಮೇಯಾಗುತ್ತದೆ.
ತುಳಸಿ – ಉಳಿತೇಗು ಬಂದಾಗ 5-6 ತುಳಸಿ ಎಲೆ ಸೇವನೆಯಿಂದ ಉಳಿತೇಗು ಶಮನವಾಗುತ್ತದೆ.
ಬಾಳೇಹಣ್ಣು -ಎಲಕ್ಕಿ ಬಾಳೇಹಣ್ಣಿನ ಸೇವನೇ ಇಂದ ಅಜೀರ್ಣದಿಂದಾದ ಅಮ್ಲಪಿತ್ತ ಕಡಿಮೇಯಾಗುತ್ತದೆ.
ಜೀರಿಗೆ -ಜೀರಿಗೆಯನ್ನು ಬಾಂಡಲಿಯಲ್ಲಿ ಹುರಿದು,1/2 ಚಮಚದಷ್ಟು ಸೇವಿಸಿದಾಗ ಬಾಯಲ್ಲಿ ಸಲೈವ(ಬಾಯಿಯ ನೀರು) ಹೆಚ್ಚಾಗಿ, ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ ಹೇಗೆ ಅಜೀರ್ಣ,ವಿದಾಹಿ ಆಹಾರದಿಂದ ಉಂಟಾಗುವ ಅಮ್ಲಪಿತ್ತ ಕಡಿಮೇಯಾಗುತ್ತದೆ.
ಹಾಲು -ಕಾಯಿಸಿ ,ತಣ್ಣಗಾಗಿರಿಸಿರುವ ಹಾಲನ್ನು ಸೇವಿಸುವುದರಿಂದ ಹೋಟ್ಟೆಹುಣ್ಣೀನಿಂದಾಗುತ್ತಿರುವ ನೇವನ್ನು ಶೀರ್ಘವಾಗಿ ಕಡಿಮೆಮಾಡಿಸುತ್ತದೆ. ಆದರೆ ಹಾಲನ್ನು ಕುಡಿಯುವಾಗ ಸಕ್ಕರೆ ಹಾಕದಿರುವುದು ಉತ್ತಮ.
ಪುದೀನ-10 ಎಲೆ ಪುದೀನವನ್ನು 250 ಎಮ್.ಎಲ್ ನೀರಿನಲ್ಲಿ ಹಾಕಿ ಕುದಿಸಿ, ತಣ್ಣಗಾದ ನಂತರ ಶೋದಿಸಿ ಕುಡಿಯಬೇಕು.
ಎಳನೀರು – 100 ಎಮ್.ಎಲ್ -200 ಎಮ್.ಎಲ್ ಎಳನೀರನ್ನು ಬೆಳಗೆ ಕುಡಿಯುವುದರಿಂದ ಎದೆ ಉರಿ ಕಡಿಮೆಯಾಗುತ್ತದೆ.
ಶುಂಠಿ – ಶುಂಠಿ ಹಾಗು ಬೇಲ್ಲವನ್ನು ಬಾಯಿಗೆ ಹಾಕಿ ಸವಿಯುವುದರಿಂದ ಪಾಚನ ಶಕ್ಕಿ ಹೇಚ್ಚಾಗಿ ಅಜೀರ್ಣ, ವಿದಾಹಿ, ಅತಿ ಶೀರ್ಘವಾಗಿ ಸೇವಿಸಿದ ಆಹಾರದಿಂದ ಉಂಟಾದ ಅಮ್ಲಪಿತ್ತ ನಿವಾರಣೆಯಾಗುತ್ತದೆ.
ಬಾರ್ಲೀ -1 ಚಮಚ ಬಾರ್ಲೀ 250 ಎಮ್.ಎಲ್ ನೀರಿನಲ್ಲಿ ಹಾಕಿ ಕುದಿಸಿ, ತಣ್ಣಗಾದ ನಂತರ ಸೇವಿಸುವುದರಿಂದ , ಶರೀರದಲ್ಲಿ ಪೀತ್ತದ ಪ್ರಮಾಣದಿಂದಾಗಿ ಆಮ್ಲಪಿತ್ತವಾಗಿದ್ದಲ್ಲಿ ಕಡಿಮೇಯಾಗುತ್ತದೆ.
ಬೇಲ್ಲ,ಹಿಪ್ಪಳಿ– ಬೇಲ್ಲ,ಹಿಪ್ಪಳಿಯನ್ನು ಸಮಪ್ರಮಾಣವಾಗಿರಿಸಿ 1 ಚಮಚ ಕಾಲಿಹೋಟ್ಟೆಯಲ್ಲಿ ಸೇವಿಸುವುದರಿಂದ ಅಮ್ಲಪಿತ್ತ ನಿವಾರಣೇಯಾಗುತ್ತದೆ .
ನೀರು – ಅತಿ ಮುಖ್ಯವಾಗಿ 1 ದಿನದಲ್ಲಿ 2-21/2 ಲೀ. ನೀರನ ಸೇವನೇಮಾಡಬೇಕು.ಹಾಗು ದಿನ ಬೇಳಗೆ ಎದ್ದ ಕೂಡಲೇ 1/2 ಲೀ. ನೇರನ್ನು ಸೇವಿಸಬೇಕು.
ಲೇಖಕರು
ಡ.ಸಿಂಧು ಪ್ರಶಾಂತ್
9743857575