
ಬೆಂಗಳೂರು:ಜೂ-14: ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭೀಣಿಗೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ರಕ್ತದಾನ ಮಾಡಿಡುವ ಮೂಲಕ ಮಾನವೀಯತೆ ಮೆರೆದಿದ್ದಿದ್ದಾರೆ. ಈ ಮೂಲಕ ಗರ್ಭಿಣಿ ಮಹಿಳೆ ಸೇರಿ ಇಬ್ಬರು ಅವಳಿ ಮಕ್ಕಳ ಜೀವ ಉಳಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ರಕ್ತ ಬೇಕಾಗಿದೆ ಎನ್ನುವ ಟ್ವೀಟ್ ನೋಡಿದ ತಕ್ಷಣ ಹರಿಪ್ರಿಯಾ ಆಸ್ಪತ್ರೆಗೆ ದಾವಿಸಿದ್ದರು. ತಮ್ಮ ಸಹಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು ಎಂದು ಬರೆದುಕೊಂಡಿದ್ದಾರೆ.
Actress Haripriya, Donates Blood, Pregnant Women