ವಿಶೇಷ ಗ್ರಾಮಸಭೆಗಳನ್ನು ಕರೆದು ಜನರ ಸಮಸ್ಯೆ ಬಗೆಹರಿಸುತ್ತೇವೆ

ದೊಡ್ಡಬಳ್ಳಾಪುರ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಹದಿನೇಳು ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಸಾಧಿಸಿದ ನೂತನ ಶಾಸಕ ನಿಸರ್ಗ ನಾರಾಯಣಸ್ವಾಮಿ ತೂಬಗೆರೆ ಹೋಬಳಿಯ ಬಚ್ಚಹಳ್ಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಚುನಾವಣೆಯಲ್ಲಿ ಜಯಗಳೀಸಿದ ಬಳಿಕ ಹೋಬಳಿಗೆ ಮೊದಲಬಾರಿ ಭೇಟಿ ನೀಡಿ ಮಾತನಾಡಿ ತೂಬಗೆರೆ ಹೋಬಳಿಯ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಸಮಾಜ ಸೇವಕನಾಗಿದ್ದ ನನಗೆ ಜೆಡಿಎಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ವರ್ದಿಸಿ ಅಂತ್ಯತ ಬಹುಮತಗಳಿಂದ ಜಯ ಗಳಿಸಲು ಸಹಕರಿಸಿದ ನಿಮ್ಮೆಲರ ಋಣ ತೀರಿಸುವೆ ಎಂದು ಹೇಳಿದರು.
ಬಮೂಲ್ ಅಧ್ಯಕ್ಷ ಎಚ್.ಅಪ್ಪಯ್ಯಣ್ಣ ಮಾತನಾಡಿ ತೂಬಗೆರೆ ಹೋಬಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ .ಈ ಹಿಂದೆ ಐದು ವರ್ಷದಲ್ಲಿ ಉತ್ತಮ ಕೆಲಸಗಳು ಆಗಿವೆ ಒಂದೇ ಬಾರಿ ರಾಮರಾಜ್ಯ ಮಾಡಲು ಸಾಧ್ಯವಿಲ್ಲ .ಹಂತಹಂತವಾಗಿ ಕೆಲಸಗಳು ಹಾಗುತ್ತವೆ. ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಇಲಾಖಾವಾರು ಅಧಿಕಾರಿಗಳ ಗ್ರಾಮ ಸಭೆಯನ್ನು ಶಾಸಕರ ನೇತೃತ್ವದಲ್ಲೇ ಪ್ರತ್ಯೇಕ ಗ್ರಾಮ ಸಭೆ ಕರೆದು ಸ್ಥಳೀಯ ಸಮಸ್ಯೆಗಳನ್ನು ನಿವಾರಣೆ ಮಾಡುವ ಚಿಂತನೆ ಮಾಡುತ್ತೇವೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಹೋಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೂತನ ಶಾಸಕರು ಭೇಟಿ ನೀಡಿ ವಸತಿ ಶಾಲೆಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು
ಕಾರ್ಯಕ್ರಮದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾರಾಯಣಪ್ಪ, ಜೆಡಿಎಸ್ ಮುಂಖಡ ನರಸಿಂಹಯ್ಯ, ಜೆಡಿಎಸ್ ಹೋಬಳಿ ಅಧ್ಯಕ್ಷ ದೇವರಾಜು. ಯುವ ಜೆಡಿಎಸ್ ಅಧ್ಯಕ್ಷ ಮುರಳಿ. ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಗೀರಿಶ್. ಹಾಡೋನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶಾಮಲಶ್ರೀನಿವಾಸ..ಎಸ್.ಸಿ ಎಸ್.ಟಿ ಘಟಕದ ಜಿಲ್ಲಾ ಅಧ್ಯಕ್ಷ ಗುರುಪ್ಪ. ಮುಂಖಡರಾದ ನಾಗಾರಾಜು. ಹರೀಶ್ ನಾಯಕ್. ಚನ್ನೆಗೌಡ. ಮುನಿಯಪ್ಪ. ಇನ್ನು ಮುಂತಾದವರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ