ಮೈಸೂರು, ಜೂ.13-ಬಂಡೀಪುರ ಅರಣ್ಯ ಪ್ರದೇಶದ ಹಿಡಿಯಾಲ ಬಳಿ ಸೆರೆ ಹಿಡಿಯಲಾಗಿದ್ದ ಗಂಡು ಹುಲಿ ಸಾವನ್ನಪ್ಪಿದೆ.
ನಗರದ ಹೊರ ವಲಯದಲ್ಲಿರುವ ಕೂರಗಳ್ಳಿಯಲ್ಲಿನ ಮೈಸೂರು ಮೃಗಾಲಯದ ಪ್ರಾಣಿಗಳ ಪುನರವಸತಿ ಕೇಂದ್ರದಲ್ಲಿ ಸೆರೆ ಸಿಕ್ಕಿದ್ದ ಹುಲಿಯು ಸಾವನ್ನಪ್ಪಿದೆ.
ಮೃತ ಹುಲಿಯು ಕಾಡಿನಲ್ಲಿ ಮತ್ತೊಂದು ಹುಲಿಯ ಜೊತೆ ಕಾಳಗ ನಡೆಸಿದ್ದು ಹುಲಿಯು ನಿತ್ರಾಣಗೊಂಡು ಅಲ್ಲಿಂದ ಜೂನ್ 10ರಂದು ಹಿಡಿಯಾಲ ಬಳಿಯ ಗ್ರಾಮವೊಂದಕ್ಕೆ ಬಂದಿದೆ.
ಈ ವೇಳೆ ಎಚ್ಡಿ ಕೋಟೆ ತಾಲೂಕಿನ ಚಿಲಕ ಹಳ್ಳಿ ಗ್ರಾಮದಲ್ಲಿ ಹಸುವೊಂದರ ಮೇಲೆ ದಾಳಿ ನಡೆಸಿ ಪರಾರಿಯಾಗಿತು.್ತ ಇದನ್ನು ಕಂಡು ಗ್ರಾಮಸ್ಥರು ಭಯಗೊಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಹಿಡಿಯಾಲ ಬಳಿಯ ಕಾಳಿಕಟ್ಟೆ ಕರೆ ಬಳಿ ವೀರಭದ್ರಪ್ಪ ಎಂಬುವರ ಜಮೀನನ ಬಳಿ ಹುಲಿ ಇರುವುದು ಪತ್ತೆ ಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ಕೈಗೊಂಡಿದ್ದರು.
ಈ ವೇಳೆ ನಿತ್ರಣಗೊಂಡಿದ್ದ ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಅದನ್ನು ಸೆರೆ ಹಿಡಿದು ಮೈಸೂರು ಮೃಗಾಲಯಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಹುಲಿಯು ಸಾವನ್ನಪ್ಪಿದೆ.
ಹುಲಿಯ ಕಾದಾಟದಿಂದ ತೆಲೆ ಹಾಗೂ ದವಡೆ ಭಾಗಕ್ಕೆ ಗಂಭೀರವಾದ ಗಾಯವಾಗಿ ದವಡೆಯ ಮೂಳೆಗಳು ಸಹ ಮುರಿದಿದ್ದವು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ರವಿಶಂಕರ್ ತಿಳಿಸಿದ್ದಾರೆ.