ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದ ದುಷ್ಕರ್ಮಿಗಳು 3 ಸಾವಿರ ಹಣವಿದ್ದ ಪರ್ಸ್, ಮೊಬೈಲ್ ಕಳ್ಳತನ ಮಾಡಿ ಪರಾರಿ

 

ಬೆಂಗಳೂರು, ಜೂ.11-ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದ ದುಷ್ಕರ್ಮಿಗಳು 3 ಸಾವಿರ ಹಣವಿದ್ದ ಪರ್ಸ್, ಮೊಬೈಲ್ ಕಳ್ಳತನ ಮಾಡಿರುವ ಘಟನೆ ಪುಲಕೇಶಿ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೋರ್ ರಸ್ತೆಯಲ್ಲಿ ಅಭಿನವ್ ಎಂಬುವರು ರಾತ್ರಿ ಕಾರು ನಿಲ್ಲಿಸಿ ಸಮೀಪದ ಹೊಟೇಲ್‍ಗೆ ಊಟಕ್ಕೆಂದು ಹೋಗಿದ್ದಾರೆ. ರಾತ್ರಿ 12.30ರಲ್ಲಿ ಹೊಟೇಲ್‍ನಿಂದ ಕಾರಿನ ಬಳಿ ಬರುವಷ್ಟರಲ್ಲಿ ಕಳ್ಳರು ಕಾರಿನ ಗಾಜು ಒಡೆದು ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಅಭಿನವ್ ಪುಲಕೇಶಿ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ