ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಪರ್ಕ ಭಾರತದ ಆದ್ಯತೆ : ಮೋದಿ

ಕ್ವಿಂಗ್‍ಡಾವೋ, ಜೂ.10-ನೆರೆಹೊರೆ ರಾಷ್ಟ್ರಗಳು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಪ್ರಾಂತ್ಯದೊಂದಿಗೆ ಸಹಕಾರ-ಸಂಪರ್ಕವು ಭಾರತದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಸ್‍ಸಿಒ ಶೃಂಗಸಭೆಯಲ್ಲಿ ನಿರ್ಬಂಧಿತ ಅಧಿವೇಶನದಲ್ಲಿ ಮಾತನಾಡಿದ ಅವರು ಈ ಶೃಂಗದ ಯಶಸ್ವಿ ಫಲಶ್ರುತಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿದೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿ ಭದ್ರತೆ, ಎಸ್-ನಾಗರಿಕರ ಭದ್ರತೆ, ಇ-ಆರ್ಥಿಕ ಅಭಿವೃದ್ದಿ, ಸಿ-ಪ್ರಾದೇಶಿಕ ಸಂಪರ್ಕ, ಯು_ಏಕತೆ, ಆರ್-ಸೌರ್ವಭೌಮತ್ವ ಮತ್ತು ಸಮಗ್ರತೆಗೆ ಗೌರವ ಹಾಗೂ ಇ-ಪರಿಸರ ಸಂರಕ್ಷಣೆ-ಇದು ಮೋದಿ ಅವರ ವ್ಯಾಖ್ಯಾನವಾಗಿದೆ. ಭೌಗೋಳಿಕಶಾಸ್ತ್ರದ ವ್ಯಾಖ್ಯಾನ ಪರಿವರ್ತನೆಗೆ ಕಾರಣವಾಗುವ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಕಾಲದಲ್ಲಿ ನಾವೀಗ ಇದ್ದೇವೆ. ಆದ್ದರಿಂದ ನೆರೆಹೊರೆ ರಾಷ್ಟ್ರಗಳು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಪ್ರಾಂತ್ಯದೊಂದಿಗೆ ಸಹಕಾರ-ಸಂಪರ್ಕವು ಭಾರತದ ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ