ಖ್ಯಾತ ಬಾಲಿವುಡ್ ನಟ ಸಲ್ಮಾನ್‍ಖಾನ್ ಹತ್ಯೆಗೆ ಮುಂಬೈ ಭೂಗತಲೋಕದ ಶಾಪ್‍ಶೂಟರ್ ಸಂಚು

ಮುಂಬೈ, ಜೂ.10- ಖ್ಯಾತ ಬಾಲಿವುಡ್ ನಟ ಸಲ್ಮಾನ್‍ಖಾನ್ ಹತ್ಯೆಗೆ ಮುಂಬೈ ಭೂಗತಲೋಕದ ಶಾಪ್‍ಶೂಟರ್ ಒಬ್ಬ ಸಂಚು ರೂಪಿಸಿದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆ ಹರಿಯಾಣ ಪೆÇಲೀಸರು ಬಂಧಿಸಿದ ಸಂಪತ್ ನೆಹ್ರಾ ಎಂಬ ಕ್ರಿಮಿನಲ್ ಸಲ್ಲು ಹತ್ಯೆಗೆ ಯೋಜನೆ ರೂಪಿಸಿ, ಇದಕ್ಕಾಗಿ ಶಾರ್ಪ್ ಶಂಕರ್ ಜತೆ ಸಂಪರ್ಕ ಸಾಧಿಸಿದ ಎಂದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಈ ಹಿಂದೆ ಸಲ್ಮಾನ್‍ರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪಾತಕಿ ಲಾರೆನ್ಸ್ ಬಿಷೋಯ್ ಜತೆ ಸಂಪತ್ ನೆಹ್ರಾ ಸಂಪರ್ಕವಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ