ಇತ್ತೀಚೆಗೆ ಅಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಹೊಟೇಲ್ ಮಾಲೀಕ ಹಾಗೂ ಸಿಬ್ಬಂಧಿ ಮೇಲಿನ ಹಲ್ಲೆ ಹಾಗೂ ಹೋಟೆಲ್ ಮಾಲಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಜೂನ್ ೧೧ ಸೋಮವಾರ ದಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಎಲ್ಲ ಹೋಟೆಲ್ ಬಂದ್ಗೆ ಕರೆ ನೀಡಲಾಗಿದೆ ಎಂದು ಹುಬ್ಬಳ್ಳಿ ಹೋಟೆಲ್ ಸಂಘದ ಮುಖಂಡ ಸುಧಾಕರ್ ಶೆಟ್ಟಿ ಹೇಳಿದರು. ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಇದುವರೇಗೆ ೯೬ ಹಲ್ಲೆ ಪ್ರಕರಣಗಳು ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದಿವೆ. ನೀರಂತರವಾಗಿ ಹೋಟೆಲ್ ಮಾಲಿಕರು ಸೇರಿದಂತೆ ಸಿಬ್ಬಂದಿಯ ಮೇಲೆ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಎಂದು ಕಳವಳ ವ್ಯಕ್ತಪಡಿಸಿದರು. ಸೋಮವಾರದಂದು ಹುಬ್ಬಳ್ಳಿ ಮರಾಠಗಲ್ಲಿಯ ಹುಬ್ಬಳ್ಳಿ ಹೋಟೆಲ್ ಸಂಘದ ಕಚೇರಿಯಿಂದ ಪ್ರತಿಭಟನೆ ಆರಂಭಿಸಿ ನಗರದ ದುರ್ಗದಬೈಲ್, ಮೈಸೂರ ಸ್ಟೊರ್, ದಾಜಿವಾನ್ ಪೇಟ್ ಹಾಗೂ ಸಂಗೊಳ್ಳಿ ರಾಯಣ ವೃತದ ಮಾರ್ಗವಾಗಿ ತಹಶಿಲ್ದಾರ ಕಚೇರಿ ಹೋಗಿ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು, ಪ್ರತಿಭಟನೆಯಲ್ಲಿ ಅವಳಿ ನಗರದ ಎಲ್ಲ ಹೋಟೆಲ್ ಮಾಲಿಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಲ್ಲಿದ್ದಾರೆ ಎಂದು ಹೇಳಿದರು.