ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು; ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ:ಜೂ-9:ವಿಶ್ವದ ಬಲಿಷ್ಟ ಭದ್ರತಾ ಪಡೆಗಳಲ್ಲಿ ಭಾರತವೂ ಒಂದು, ಹತ್ಯೆಯಂತಹ ಕೃತ್ಯಗಳಿಗೆ ಅನುವು ಮಾಡಿಕೊಡುವುದಿಲ್ಲ. ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹಿರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಭದ್ರತಾ ಪಡೆಗಳು ಬಲಿಷ್ಠವಾಗಿದ್ದು, ಹತ್ಯೆಯಂತಹ ಸಂಚನ್ನು ವಿಫಲಗೊಳಿಸಲಿವೆ. ಹತ್ಯೆಯಂತಹ ಕೃತ್ಯಗಳಿಗೆ ಭದ್ರತಾ ಪಡೆಗಳು ಯಾವುದೇ ಕಾರಣಕ್ಕೂ ಅಅವಕಾಶ ಮಾಡಿಕೊಡುವುದಿಲ್ಲ, ಹತ್ಯೆ ಸಂಚನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಗಲೇ ಈ ಸಂಬಂಧ ಕೆಲ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಕೈ ಹಾಕುವ ದುಷ್ಕರ್ಮಿಗಳನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ನಿನ್ನೆಯಷ್ಟೇ ಪುಣೆ ಪೊಲೀಸರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಈ ಸಂಬಂಧ ದುಷ್ಕರ್ಮಿಗಳಿಂದ ವಶಪಡಿಸಿಕೊಂಡ ಪತ್ರವನ್ನೂ ಕೂಡ ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ