ಹಸುಗೂಸಿನ ಮೃತದೇಹ ಕಸದ ಬುಟ್ಟಿಯಲ್ಲಿ ಪತ್ತೆ!

ಮೈಸೂರು, ಜೂ.9- ಬೆಳ್ಳಂಬೆಳಗ್ಗೆ ಹಸುಗೂಸಿನ ಮೃತದೇಹ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದೆ.
ಹೆಬ್ಬಾಳ ಎರಡನೆ ಹಂತದ ಮುಖ್ಯರಸ್ತೆಯೊಂದರಲ್ಲಿ ಕಸ ಬಿದಿದ್ದ ಕಡೆ ನಾಯಿಗಳು ಬೊಗಳುತ್ತಾ ಕಸದ ಬುಟ್ಟಿಯನ್ನು ಎಳೆದಾಡುತ್ತಿದ್ದವು. ಇದರಿಂದ ಚಿಕಿತಗೊಂಡ ಸಾರ್ವಜನಿಕರು ಬಳಿ ಬಂದು ನೋಡಿದಾಗ ಕಸದ ಬುಟ್ಟಿಯಲ್ಲಿ ಕವರ್‍ನಲ್ಲಿ ಸುತ್ತಿಟಿದ್ದ ನವಜಾತ ಗಂಡು ಶಿಶುವಿನ ದೇಹ ಪತ್ತೆಯಾಗಿದೆ. ತಕ್ಷಣ ಹೆಬ್ಬಾಳ ಠಾಣೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ ಪೆÇಲೀಸರು ಶಿಶುವಿನ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ಕಳುಹಿಸಿದರು. ಹೆತ್ತ ತಾಯಿಯೇ ಮಗುವನ್ನು ಕೊಂದು ಕವರ್‍ನಲ್ಲಿ ಹಾಕಿ ಬಿಸಾಡಿರಬಹುದು, ಅಥವಾ ಅನೈತಿಕ ಸಂಬಂಧದಲ್ಲಿ ಜನಿಸಿದ ಮಗುವೆಂದು ಹೀಗೆ ಮಾಡಿರಬಹುದು ಇಂತಹ ಕಲ್ಲು ಹೃದಯದವರೂ ಇದ್ದಾರಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದದ್ದು ಕಂಡು ಬಂತು. ಹೆಬ್ಬಾಳ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ