ದಾಂಡೇಲಿ : ನೀರಿನ ಕರ ಹಾಗೂ ಘನತ್ಯಾಜ್ಯ ವಿಲೇವಾರಿ ದರವನ್ನು ಹೆಚ್ಚಿಗೆ ಮಾಡಿರುವುದನ್ನು ಹಾಗೂ ಅಸಮರ್ಪಕ ಸ್ವಚ್ಚತಾ ಕಾರ್ಯವನ್ನು ವಿರೋಧಿಸಿ ಹಾಗೂ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಕರೆಯ ಮೇರೆಗೆ ದಾಂಡೇಲಿ ನಗರಸಭೆಯ ವಿರುದ್ಧ ಗುರುವಾರ ನಗರ ಸಭೆಯ ಮುಖ್ಯಧ್ವಾರದ ಮುಂಭಾಗದಲ್ಲಿ ಒಂದು ದಿನ ಧರಣಿ ಸತ್ಯಾಗೃಹವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಸಮಿತಿಯ ಉಪಾಧ್ಯಕ್ಷ ಅಶೋಕ ಪಾಟೀಲ ಅವರು ನಗರಸಭೆಯ ಕೆಲಸದಿಂದ ಸಾರ್ವಜನಿಕರು ಬೇಸತ್ತು ಹೋಗಿರುತ್ತಾರೆ. ನಗರದಲ್ಲಿ ಮುಖ್ಯ ಚೆಂಬರ್ಗಳು, ಯು.ಜಿ.ಡಿ. ಪೈಪಗಳು ಒಡೆದ ಪರಿಣಾಮವಾಗಿ ದುರ್ವಾಸನೆ ಬರುತ್ತಿರುವುದನ್ನು ನಗರಸಭೆಯವರ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ಸಮಿತಿಯ ಉಪಾಧ್ಯಕ್ಷರಾದ ಬಲವಂತ ಬೊಮ್ಮನಳ್ಳಿಯವರು ಇಂದು ನಗರಸಭೆಯವರು ರೂ. 4 ಲಕ್ಷ ವೆಚ್ಚದ ತ್ರೀ-ಚಕ್ರ ವಾಹನ ಹಾಗೂ ಸೊಳ್ಳೆ ನಿಮೂಲನಾ ಯಂತ್ರವನ್ನು ಉಪಯೋಗಿಸದಿರುವುದು ಕಂಡುಬರುತ್ತಿದೆ. ಈ ಯಂತ್ರವನ್ನು ಕಳೆದ 2 ವರ್ಷಗಳಿಂದ ಎಲ್ಲಿಯೂ ಸಹ ಪಾಗಿಂಗ್ ಯಂತ್ರವನ್ನು ಉಪಯೋಗಿಸದಿರುವುದರ ಬಗ್ಗೆ ಕಿಡಿ ಕಾರಿದರು.
ನಗರ ಸಭೆಯ ಮಾಜಿ ಅಧ್ಯಕ್ಷ ಟಿ.ಎಸ್.ನಾಯ್ಕ, ಮಾತನಾಡಿ ದಾಂಡೇಲಿ ನಗರದ ಬುಡದಲ್ಲಿ ಹರಿದು ಹೋಗುತ್ತಿರುವ ಕಾಳಿ ನದಿಯ ನೀರನ್ನು ನಗರದ ಜನತೆಗೆ ಸಮರ್ಪಕವಾಗಿ ವಿತರಣೆ ಮಾಡಲು ವಿಫಲವಾಗಿದ್ದು ದುದರ್ೈವದ ಸಂಗತಿ ಎಂದರು.
ಸಮಿತಿಯ ಅಧ್ಯಕ್ಷ ಅಕ್ರಮ ಖಾನರವರು ಮಾತನಾಡುತ್ತಾ ನಗರಸಭೆಯು ಎಲ್ಲ ರೀತಿಯಲ್ಲಿ ವಿಫಲವಾಗಿದೆ. ಹಲವಾರು ಬಾರಿ ನಗರಸಭೆಗೆ ಮನವಿ ಕೊಟ್ಟು ಗಮನಕ್ಕೆ ತಂದರೂ ಸಹ ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿಲ್ಲ. ನಗರಸಭೆಯ ತನ್ನ ಉದ್ಧಟತನ ಧೋರಣೆಯಿಂದ ನಗರದ ಅಭಿವೃದ್ಧಿ ಕುಂಟಿತ ಹಾಗೂ ಮಾರಕವಾಗುತ್ತಿದೆ. ನಗರದ ಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹಳೇ ದಾಂಡೇಲಿಯ ಸಾರ್ವಜನಿಕರು ಅನೇಕ ವರ್ಷಗಳಿಂದ ಫುಟಪಾತ (ಕಾಲ್ನಡೆಗೆ ರಸ್ತೆ) ಮಾಡಲು ಮನವಿ ಸಲ್ಲಿಸಿದರೂ ಕ್ರಮ ವಹಿಸುತ್ತಿಲ್ಲ. ಅಲ್ಲದೇ ದಾಂಡೇಲಿಯಲ್ಲಿರುವ ಬ್ರೀಟಿಶ ಕಾಲದ ಸಾ-ಮಿಲ್ನ್ನು ಸಹ ಮುಚ್ಚುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ. ಅಲ್ಲದೇ ನಗರದಲ್ಲಿ ಅತಿಕ್ರಮಣ ನಡೆಯುತ್ತಿದ್ದರೂ ಕಂಡು ಕಾಣದಂತೆ ಕಣ್ಣು ಮುಚ್ಚಿಕೊಂಡು ಕುಳಿತಿರುವ ನಗರಾಡಳಿತದವರಿಗೆ ಏನೆಂದು ಕರಿಯಬೇಕು? ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಸುತ್ರವಾಗಿ ಪರಿಹರಿಸಿ ದಾಂಡೇಲಿ ನಗರದ ಜನತೆಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಇನ್ನೂ ತೀವ್ರವಾದ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ನಂತರ ಸಮಿತಿಯ ಸಮಿತಿಯ ಉಪಾಧ್ಯಕ್ಷ ಹಾಜಿ ಪಿರೋಜ ಪೀರಜಾದೆ, ಕಾರ್ಯದರ್ಶಿ, ಸಿ.ಎಸ್.ಲೋಬೊ, ಅಬ್ದುಲ ವಾಹಬ ಬನ್ಸರಿ, ಚಂದ್ರಕಾಂತ ನಡಿಗೇರ, ರವಿ ಮಾಳಕರಿ, ಸಿ.ಐ.ಟಿ.ಯು. ಕಾರ್ಮಿಕ ಮುಖಂಡ ಉದಯ ನಾಯ್ಕ ಮತ್ತು ಕೆಪಿಸಿ ನಿವೃತ್ತ ಸಂಘದ ಅಧ್ಯಕ್ಷ ಬಸಪ್ಪಾ ಕವಲಗಿ ಇವರೆಲ್ಲರೂ ಹೋರಾಟಕ್ಕೆ ಬೆಂಬಲಿಸಿ ನಗರಸಭೆಯ ದುರಾಡಳಿತದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಖಂಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ್, ನಗರಸಭೆ ಅಧ್ಯಕ್ಷ ಎನ್.ಜಿ.ಸಾಳುಂಕೆ, ನಗರಸಭೆ ಪೌರಾಯುಕ್ತ ಜತ್ತಣ್ಣನವರು ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಸಮಿತಿಯ ಪದಾಧಿಕಾರಿಗಳಿಗೆ ಅಹ್ವಾನಿಸಿದರು. ಸುಧಿರ್ಘವಾದ ಚರ್ಚೆ ನಂತರ ನಗರಸಭೆ ಅಧಿಕಾರಿಗಳ ಅನುಪಸ್ಥಿತಿಯ ಕಾರಣ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸುವುದಾಗಿ ಎನ್.ಜಿ.ಸಾಳುಂಕೆ ಪ್ರತಿಭಟನಾಕಾರರಿಗೆ ತಿಳಿಸಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸಮಿತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ದಾಂಡೇಲಿಯ ತಹಸೀಲ್ದಾರರವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಿ.ವಿ.ಶಾನಭಾಗ, ಮಾರುತಿರಾವ ಮಾನೆ, ಎಸ್.ಎ.ಕೋನಾಪುರಿ, ಡಿ.ಎಸ್.ಕಲ್ಗುಟಕರ, ಮಹಾದೇವ ನಾಯ್ಕ, ಸದಾನಂದ ಪ್ರಭು, ರಮೇಶ ಚಂದಾವರ, ಶಿವಾನಂದ ಗಗ್ಗರಿ, ಗೌರೀಶ ಬಾಬ್ರೇಕರ, ರವಿ ಲಕ್ಷ್ಮೇಶ್ರರ, ರಾಜೇಂದ್ರ ಪೈ, ಜಾಹಂಗೀರ ಬಾಬಾ ಖಾನ, ದೇವೆಂದ್ರ ಮಾದರ, ಡುಗ್ಗು ನಾಯಕ, ಎ.ಎನ್.ಪಾಟೀಲ, ಮುಜಬಾ ಚಬ್ಬಿ, ಬಸಪಾ ಅಂಗಡಿ, ಕೃಷ್ಣಾ ಇಂಗೊಳೆ, ಲೀಲಾವತಿ ಕೊಳಚೆ, ರಮಾ ರವೀಂದ್ರ, ಶಾರದಾ ಪರಶುರಾಮ, ಮೀನಾಕ್ಷಿ ಬಡಿಗೇರ, ಹಳೇ ದಾಂಡೇಲಿ ಮಹಿಳಾ ಮಂಡಳದವರು ಮೊದಲಾದವರು ಉಪಸ್ಥಿತರಿದ್ದರು.