ಕರ್ನಾಟಕ ಒನ್ ಕೇಂದ್ರದಲ್ಲಿ ಶಾಟ್ ಸರ್ಕ್ಯೂಟ್

ದಾಂಡೇಲಿ : ಮಟ, ಮಟ ಮಧ್ಯಾಹ್ನ ನಗರದ ನಗರ ಸಭೆಯ ಕಟ್ಟಡದಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಸಿಬ್ಬಂದಿಗಳ ಸಮಯೋಚಿತ ಪ್ರಜ್ಞೆಯಿಂದ ಮುಂದಾಗಬಹುದಾದ ಅನಾಹುತವೊಂದು ತಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಸಮಯದಲ್ಲಿ ಸ್ವಿಚ್ ಆಪ್ ಆಗಿದ್ದ ಎಸಿ ಯಂತ್ರಕ್ಕೆ ಹಠತ್ತನೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ್ದನ್ನು ಅರಿತ ಕೇಂದ್ರದ ಸಿಬ್ಬಂದಿಗಳು ಮತ್ತು ವಿಶೇಷ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿರುವ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿ ಶ್ರೀಕಾಂತ ಶಾನಭಾಗ್ ತಕ್ಷಣ ಸ್ಥಳಕ್ಕೆ ಧಾವಿಸಿ, ಎ.ಸಿ ಗೆ ತಗುಲಿದ್ದ ಬೆಂಕಿಯನ್ನು ನಂದಿಸಿದರು. ಒಂದು ವೇಳೆ ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆಯದಿದ್ದಲ್ಲಿ ಅಲ್ಲಿದ್ದ ಕಂಪ್ಯೂಟರ್ ಗಳು ಹಾಗೂ ಇನ್ನಿತರ ಎಲೆಕ್ಟ್ರನಿಕ್ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗುತ್ತಿದ್ದವು.

ಘಟನೆಗೆ ಕಾರಣವೆನೆಂದು ತಿಳಿದುಬರದಿದ್ದರೂ, ಶಾಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರುವುದು ಸಧ್ಯಕ್ಕೆ ರುಜುವಾತಾಗಿದೆ. ಕಳೆದೆರಡು ತಿಂಗಳ ಹಿಂದೆಯಷ್ಟೆ ಆರಂಭವಾದ ಈ ಕೇಂದ್ರಕ್ಕೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಿತ್ತಾದರೂ, ಕಳಪೆ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಿರಬಹುದೇ ಎಂಬ ಪ್ರಶ್ನೆ ನಾಗರೀಕ ವಲಯದಲ್ಲಿ ಚರ್ಚೆಯಲ್ಲಿದ್ದು, ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ