
ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆಯವರು ರಾಜ್ಯದ ಸಂಪುಟ ದರ್ಜೆಯ ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
ನಗರದ ಯುನೈಟೆಡ್ ಸೇಲ್ಸ್ ಮಳಿಗೆಯ ಮುಂಭಾಗದಲ್ಲಿ ಸಿಹಿ ಹಾಗೂ ಪಾನೀಯವನ್ನು ಹಂಚಿ ಸಚಿವ ದೇಶಪಾಂಡೆಯವರಿಗೆ ಜೈಕಾರ ಹಾಕಿ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು ಸಂಭ್ರಮ ಪಟ್ಟರು. ಕಾರ್ಯಕ್ರಮದ ನೇತೃತ್ವವನ್ನು ಪಕ್ಷದ ಹಿರಿಯ ಮುಖಂಡ ರಾಧಾಕೃಷ್ಣ ಕನ್ಯಾಡಿ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳುಂಕೆ, ನಗರ ಸಭೆ ಸದಸ್ಯೆ ಯಾಸ್ಮಿನ್ ಕಿತ್ತೂರು, ಸಹೇಲಿ ಟ್ರಸ್ಟ್ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಪಕ್ಷದ ಮುಖಂಡರುಗಳಾದ ತಸ್ವರ ಸೌಧಾಗರ, ಆರ್.ಜಿ.ಶೆಟ್ಟಿ, ಪಿರೋಜ್ ಖಾನ್ ಬಾಳೆಖಾನ್, ಮಾರುತಿ ಬೋಸ್ಲೆ ಮೊದಲಾದವರು ಉಪಸ್ಥಿತರಿದ್ದರು