ಉಜ್ವಲ ಯೋಜನೆಯ ಅನುಷ್ಟಾನದಲ್ಲಾಗುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹ

ದಾಂಡೇಲಿ; ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತವಾಗಿ ಸಿಗುವ ಅಡುಗೆ ಅನಿಲ ಸಂಪರ್ಕದ ಸಂದರ್ಭದಲ್ಲಿ ಹಲವು ತೊಂದರೆಗಳಾಗುತ್ತಿದ್ದು, ಈ ಯೋಜನೆ ನೇರವಾಗಿ ಜನರಿಗೆ ಸಿಗುವಂತಹ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಉಪಾಧ್ಯಕ್ಷ ಭೀಮಸಿ ಬಾದೋಲಿ ಜಿಲ್ಲಾಧಿಕಾರಿಗಳಲ್ಲಿ ಲಿಖಿತ ಮನವಿ ಮಾಡಿದ್ದಾರೆ.

ಉಜ್ವಲ ಯೋಜನೆಯಲ್ಲಿ ಗ್ಯಾಸ್ ಬಡವರಿಗೆ ಉಚಿತವಾಗಿ ದೊರೆಯಬೇಕು. ಆದರೆ ಗ್ಯಾಸ್ ಏಜನ್ಸಿಯವರು ಬಿ.ಪಿ.ಎಲ್. ಕಾರ್ಡಿನ ಮೇಲೆ ಗ್ಯಾಸ್ ಇಲ್ಲವೆಂದು ತಹಶೀಲ್ದಾರ, ನಾಡಕಚೇರಿ ಅಥವಾ ಆಹಾರ ಇಲಾಖೆಯಿಂದ ಲಿಖಿತವಾಗಿ ತಂದು ಕೊಟ್ಟರೆ ಮಾತ್ರ ಗ್ಯಾಸ್ ನೀಡುವುದಾಗಿ ಹೇಳುತ್ತಾರೆ. ಇದು ಸಾರ್ವಜನಿಕರಿಗೆ ಸಮಾಸ್ಯೆಯಾಗುತ್ತಿದೆ. ಹಾಗಾಗಿ ಈಬಗ್ಗೆ ಗ್ಯಾಸ್ ಏಜನ್ಸಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ ನೇರವಾಗಿ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಭೀಮಸಿ ಬಾದೋಲಿ, ಒಂದೊಮ್ಮೆ ಸಮಸ್ಯೆ ಬಗೆ ಹರಿಯದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ