ದಾಂಡೇಲಿಯಲ್ಲಿ ಎನ್.ಟಿ.ಸಿ. ಪ್ರವೇಶ ಪ್ರಾರಂಭ

Varta Mitra News

ದಾಂಡೇಲಿ: ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಶಾರದಾ ಅಂಗನವಾಡಿ ಶಿಕ್ಷಕಿಯರ (ಎನ್.ಟಿ.ಸಿ) ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಪ್ರಾರಂಭವಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೇಂದ್ರದಿಂದ ಮಾನ್ಯತೆ ಪಡೆದಿರುವ ದಾಂಡೇಲಿಯ ಶಾರದಾ ಎನ್.ಟಿ.ಸಿ. ಕಾಲೇಜು ನಗರದಲ್ಲಿ ಹಲವಾರು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದ್ದು, ಪ್ರತೀವರ್ಷದ ಪಲಿತಾಂಶ ನೂರಕ್ಕೆ ನೂರರಷ್ಟಾಗುತ್ತಿದೆ. ತರಬೇತಿಯನ್ನು ಕನ್ನಡ, ಇಂಗ್ಲೀಷ್ ಮಾದ್ಯಮದಲ್ಲಿ ನೀಡಲಾಗುತ್ತಿದ್ದು, ಬಾಹ್ಯ ಪ್ರವೇಶ ಪಡೆಯುವವರಿಗೂ ಅವಕಾಶವಿದೆ. ಪರಿಶಿಷ್ಠ ಜಾತಿ, ಪಂಗಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯತಿಯಿದೆ.

ಎನ್.ಟಿ.ಸಿ. ಪ್ರವೇಶ ಪಡೆದವರಿಗೆ ಸಮವಸ್ತ್ರ ಹಾಗೂ ತರಬೇತಿ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ಮೆಹಂದಿ ಡಿಸೈನಿಂಗ್, ಬೇಸಿಕ್ ಕಂಪ್ಯೂಟರ್, ಜರದೋಸಿ ಮುಂತಾದ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಹಾಗೂ ತರಬೇತಿ ಪಡೆದವರಿಗೆ ಖಾಸಗಿ ಶಾಲೆಗಳಲ್ಲಿ ಉದ್ಯೋಗವನ್ನೂ (ಕ್ಯಾಂಪಸ್ ಸಂದರ್ಶನದ ಮೂಲಕ) ಕೊಡಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಂಯೋಜಕರಾದ ಜಲಜಾ ಬಿ. ವಾಸರೆ, ಸೋಲಾದ ಎಲೆಕ್ಟ್ರಿಕಲ್ಸ್ ಮೇಲುಗಡೆ, ಜೆ.ಎನ್. ರೋಡ್ ದಾಂಡೇಲಿ (9483798450 / 9902043450 ಹಾಗೂ ರತ್ನದೀಪಾ 9008321696) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ