ಮುಂಗಾರು ಮಳೆಗೆ ಮುನ್ನವೇ ಬೆಂಗಳೂರಿನಲ್ಲಿ ದಾಖಲೆ ಮಳೆ

 

ಬೆಂಗಳೂರು,ಜೂ.4- ಈ ವರ್ಷ ಮುಂಗಾರು ಮಳೆಗೆ ಮುನ್ನವೇ ಉದ್ಯಾನನಗರಿ ಬೆಂಗಳೂರು ಈಗಾಗಲೇ ವಾರ್ಷಿಕ ಮಳೆಯ ಶೇ.35ರಷ್ಟು ಪ್ರಮಾಣವನ್ನು ಪಡೆದಿದೆ.

ಮಾನ್‍ಸೂನ್ ಪೂರ್ವದಲ್ಲೇ ನಗರದಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದ್ದು , ಮುಂಗಾರಿಗೆ ಮುನ್ನವೇ ಸರಾಸರಿ ವಾರ್ಷಿಕ ವರ್ಷಧಾರೆಯಲ್ಲಿ ಉದ್ಯಾನನಗರಿಯಲ್ಲಿ 38 ಸೆಂ.ಮೀ ಮಳೆಯಾಗಿದೆ. ಜೂನ್‍ನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ನಗರದಲ್ಲಿ 98 ಸೆಂ.ಮೀ ಮಳೆಯಾಗುವುದು ವಾಡಿಕೆ. ಆದರೆ ಮುಂಗಾರಿಗೆ ಮೊದಲೇ ನಗರದಲ್ಲಿ ಉತ್ತಮ ವರ್ಷ ಧಾರೆಯಾಗುತ್ತಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಮಧ್ಯಾಹ್ನದ ನಂತರ ಮೋಡಗಳು ದಟ್ಟೈಸಿ ಮಳೆಯಾಗುತ್ತಿದೆ. ಮುಂಗಾರು ಮಳೆ ಇನ್ನು ಚುರುಕುಗೊಳ್ಳದಿದ್ದರೂ ವ್ಯಾಪಕ ವರ್ಷಧಾರೆಯಾಗುತ್ತಿದ್ದು, ಅಂತರ್ಜಲ ಮಟ್ಟ ಏರಿಕೆ ಹೆಚ್ಚಾಗುವ ಆಶಾಭಾವನೆ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ