ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರ: 26 ಮಂದಿ ಮೃತ

ಗ್ವಾಟೆಮಾಲಾ ಸಿಟಿ, ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಮೂವರು ಮಕ್ಕಳೂ ಸೇರಿದಂತೆ 26 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ ಒಂದಾದ ಪ್ಯೂಗೊ ವಾಲ್ಕ್ಯಾನೋ ಸ್ಫೋಟಗೊಂಡು ಕೆಂಡದ ಹೊಳೆ ಗ್ರಾಮಗಳತ್ತ ನುಗ್ಗಿ ಸಾವು-ನೋವು ಸಂಭವಿಸಿದೆ ಎಂದು ಗ್ವಾಟೆಮಾಲದ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.
ರಾಜಧಾನಿ ಗ್ವಾಟೆಮಾಲಾ ಸಿಟಿ ಮತ್ತು ಸುತ್ತಮುತ್ತಲ ಪ್ರಾಂತ್ಯಗಳ ಗ್ರಾಮಗಳಲ್ಲಿ ಲಾವರಸ ನದಿಯಂತೆ ಹರಿಯುತ್ತಿದ್ದು, ದಟ್ಟ ಬಿಸಿ ಹೊಗೆ ಆವರಿಸಿದೆ.
ಜ್ವಾಲಾಮುಖಿಯ ರೌದ್ರಾವತಾರಕ್ಕೆ 30ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದಾರೆ. ಲೆಕ್ಕವಿಲ್ಲದಷ್ಟು ಮಂದಿ ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಲಾವಾರಸದ ಹೊಳೆ ಬೋರ್ಗರೆಯುತ್ತಿರುವುದರಿಂದ 3,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ