ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಜಯನಗರದ ಚುನಾವಣೆ

 

ಬೆಂಗಳೂರು, ಜೂ.4- ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿರುವ ಬಿಜೆಪಿಗೆ ಇದೀಗ ಜಯನಗರದ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆದರೆ ಕ್ಷೇತ್ರದಲ್ಲಿನ ಭಿನ್ನಮತ ಬಿಜೆಪಿಗೆ ಕಂಠಕವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ.
ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಗೆಲ್ಲುವ ಮಹದಾಸೆ ಹೊಂದಿದ್ದ ರಾಜ್ಯ ಬಿಜೆಪಿಗೆ ಸೋಲು ಭಾರೀ ಹಿನ್ನೆಡೆ ಉಂಟು ಮಾಡಿದೆ. ಇದೀಗ ಜೂ.11ಕ್ಕೆ ಜಯನಗರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಪಾಲಿಗೆ ಇದು ಪ್ರತಿಷ್ಠೆಯ ಕಣವಾಗಿದೆ.

ವಿಜಯ ಕುಮಾರ್ ನಿಧನದಿಂದ ಮುಂದೂಡಲ್ಪಟ್ಟಿರುವ ಜಯನಗರ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಬಿಜೆಪಿಗಿದೆ. ಆದರೆ, ಕ್ಷೇತ್ರದಲ್ಲಿನ ಆಂತರಿಕ ಕಲಹ ಬಿಜೆಪಿ ಗೆಲುವಿಗೆ ಅಡ್ಡಗಾಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಪ್ರಚಾರದಿಂದ ದೂರ ಉಳಿದ ಬಿಜೆಪಿ ಕಾಪೆರ್Çರೇಟರ್‍ಗಳು:
ಅನುಕಂಪ ಆಧಾರದಲ್ಲಿ ಜಯನಗರದಲ್ಲಿ ಜಯಭೇರಿ ಬಾರಿಸುವ ಲೆಕ್ಕಾಚಾರದೊಂದಿಗೆ ಬಿಜೆಪಿ ವಿಜಯ ಕುಮಾರ್ ಸಹೋದರ ಪ್ರಹ್ಲಾದ್ ಬಾಬುರನ್ನು ಕಣಕ್ಕಿಳಿಸಿದೆ.

ಈ ನಿರ್ಧಾರವೇ ಸ್ಥಳೀಯ ಕಾಪೆರ್Çರೇಟರುಗಳ ಭಿನ್ನಮತಕ್ಕೆ ಕಾರಣವಾಗಿದೆ. ಟಿಕೆಟï ಆಕಾಂಕ್ಷಿಗಳಾಗಿದ್ದ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರು ಇದರಿಂದ ತೀವ್ರ ಅಸಮಾಧಾನಕ್ಕೊಳಗಾಗಿದ್ದು, ಇದೀಗ ಪ್ರಚಾರ ಕಾರ್ಯದಿಂದಲೂ ದೂರ ಉಳಿದಿದ್ದಾರೆ. ಸದ್ಯ ತಟಸ್ಥವಾಗಿರಲು ನಿರ್ಧರಿಸಿದ್ದಾರೆ.
ಇದರಿಂದ ಸೋಲಿನ ಭೀತಿಗೊಳಗಾಗಿರುವ ರಾಜ್ಯ ಬಿಜೆಪಿ ನಾಯಕರು, ಸಂಧಾನ ಕಾರ್ಯಕ್ಕೂ ಮುಂದಾಗಿದ್ದಾರೆ. ಆರ್.ಅಶೋಕ್ ಈಗಾಗಲೇ ಅತೃಪ್ತರ ಜೊತೆ ಮಾತುಕತೆ ನಡೆಸಿದ್ದರೂ, ಅದು ಫಲಕಾರಿಯಾಗಿಲ್ಲ. ಸಂಸದ ಅನಂತ್ ಕುಮಾರ್, ಆರ್.ಅಶೋಕ್ ಅಭ್ಯರ್ಥಿ ಪ್ರಹ್ಲಾದ್ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಅತೃಪ್ತ ಪಾಲಿಕೆ ಸದಸ್ಯರು ತಟಸ್ಥವಾಗಿ ನಿಂತಿರುವುದು ತಲೆನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್‍ನಿಂದ ಬಿರುಸಿನ ಪ್ರಚಾರ:
ಇತ್ತ ಬಿಜೆಪಿ ಎದುರಾಳಿ ಪ್ರಬಲರಾಗಿದ್ದಾರೆ. ಕಾಂಗ್ರೆಸ್‍ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ಅವರು ಪುತ್ರಿಯನ್ನು ಗೆಲ್ಲಿಸಲೇಬೇಕೆಂಬ ಪಣ ತೊಟ್ಟಿದ್ದು, ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಗೆಲುವು ಖಚಿತಗೊಳಿಸುವ ನಿಟ್ಟಿನಲ್ಲಿ ಸಾಧ್ಯ ಎಲ್ಲ ಕಾರ್ಯತಂತ್ರ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಜಯನಗರ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಸೇರಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದು ಏರ್ಪಟ್ಟಿದ್ದು, ಬಿಜೆಪಿ ಭಿನ್ನಮತದ ಮಧ್ಯೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಹರಸಾಹಸದಲ್ಲಿದ್ದರೆ, ಇತ್ತ ಕಾಂಗ್ರೆಸ್ ಶತಾಯಗತಾಯ ಗೆಲುವಿನ ಪಣ ತೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ