ನಾಗ್ಪುರ: ಆರ್ಎಸ್ಎಸ್ ಆಹ್ವಾನದ ಮೇರೆಗೆ ನಾಗ್ಪುರದ ಮುಖ್ಯಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಣಬ್ ಮುಖರ್ಜಿ ಪಾಲ್ಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ನಾಗ್ಪುರದಲ್ಲಿ ಮಾತನಾಡಿದ ಅವರು, ಮುಖರ್ಜಿ ಜಾತ್ಯತೀತ ದೃಷ್ಟಿಕೋನ ಹೊಂದಿರುವ ವ್ಯಕ್ತಿ. ಪ್ರಣಬ್ ಉತ್ತಮ ಚಿಂತಕರಾಗಿದ್ದು, ಆರ್ಎಸ್ಎಸ್ನ ಇಂತಹ ಕಾರ್ಯಕ್ರಮಕ್ಕೆ ಇವರ ಹಿತನುಡಿಗಳು ಮುಖ್ಯ ಎಂದು ತಮ್ಮ ಹಿರಿಯ ಸಹವರ್ತಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜೂನ್ 7ರಂದು ನಾಗ್ಪುರದ ಆರ್ಎಸ್ಎಸ್ನ ಮುಖ್ಯ ಕಚೇರಿಯಲ್ಲಿ ಸಂಘ ಶಿಕ್ಷಾ ವರ್ಗದಿಂದ ನಡೆಸಲಾಗುವ ಆರ್ಎಸ್ಎಸ್ನ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಲಿದ್ದಾರೆ.