
ರಾಯಚೂರು: ಜೂ-೪: ಕ್ಷುಲ್ಲಕ ಕಾರಣಕ್ಕೆ ಕುರಿಗಳಿಗೆ ವಿಷ ಪ್ರಾಷನ ಮಾಡಿದ ಹಿನ್ನಲೆಯಲ್ಲಿ 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೋಡಲಬಂಡ ಪಕ್ಕದ ತವಗ ಗ್ರಾಮದ ಮಲ್ಲಣ್ಣ ಎಂಬುವವರು
ಖಾಲಿ ಹೊಲದಲ್ಲಿ ಕುರಿಗಳು ಬರುತ್ತವೆ ಎಂಬ ಕಾರಣಕ್ಕೆ ಕುರಿಗಳಿಗೆ ವಿಷವಿಟ್ಟಿದ್ದಾರೆ.
ಅಕ್ಕಿ, ಸಜ್ಜೆಯಲ್ಲಿ ವಿಷ ಬೆರೆಸಿ ಹೊಲದಲ್ಲಿಟ್ಟಿದ್ದು, ಅದನ್ನ ತಿಂದು ಕುರಿಗಳು ಸಾವನ್ನಪ್ಪಿವೆ.
ರೋಡಲಬಂಡ ಗ್ರಾಮದ ಚಂದಪ್ಪ ಎಂಬುವವರಿಗೆ ಸೇರಿದ 150 ಕುರಿಗಳಿಗೆ ವಿಷ ಪ್ರಾಷನ ಮಾಡಲಾಗಿದೆ.