ಶಿಕ್ಷಕರು ಬೋಧನಾ ವೇಳೆ ಮೊಬೈಲ್ ಬಳಕೆ ಮಾಡುವುದು ನಿಷೇಧ: ರಾಜ್ಯ ಸರ್ಕಾgದÀ ಸುತ್ತೋಲೆ

 

ಬೆಂಗಳೂರು, ಜೂ.1-ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಬೋಧನಾ ವೇಳೆ ಮೊಬೈಲ್ ಬಳಕೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಇನ್ನು ಮುಂದೆ ಬೋಧನಾ ವೇಳೆ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಮೊಬೈಲ್ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಪ್ರತಿಯೊಂದು ಶಾಲೆಗಳಿಗೆ ಜೂ.1ರಿಂದಲೇ ಅನ್ವಯವಾಗುವಂತೆ ಸರ್ಕಾರದ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶಿಕ್ಷಕರಿಗೆ ನಿರ್ದೇಶಿಸಬೇಕು.

ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲು ಡಿಡಿಪಿಐಗಳಿಗೆ ಬಿಇಒಗಳು ಶಿಫಾರಸು ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶಿಕ್ಷಕರು ತಮ್ಮ ವಿರಾಮದ ವೇಳೆ ಮೊಬೈಲ್ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ಬೋಧನಾ ಸಮಯದಲ್ಲಿ ಕರೆ ಮಾಡುವುದು, ವಾಟ್ಸಪ್, ಸಾಮಾಜಿಕ ಜಾಲತಾಣ ಬಳಕೆ ಮಾಡುವುದು, ಮೆಸೇಜ್ ಕಳುಹಿಸುವುದಕ್ಕೆ ನಿರ್ಬಂಧ ಹಾಕಲಾಗಿದೆ.

ತರಗತಿಗೆ ಶಿಕ್ಷಕರು ಮೊಬೈಲ್ ತೆಗೆದುಕೊಂಡು ಹೋಗಬಾರದು. ಒಂದು ವೇಳೆ ಮೊಬೈಲ್ ತೆಗೆದುಕೊಂಡು ಬಂದರೆ ಅದನ್ನು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಸಿಬ್ಬಂದಿ ಕೊಠಡಿಯಲ್ಲೇ ಇಟ್ಟು ಹೋಗಬೇಕು.
ಕಾರಣವೇನು:
ಇತ್ತೀಚೆಗೆ ಶಿಕ್ಷಕರು ಬೋಧನಾ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ಪ್ರಕರಣಗಳು ಸಾಕಷ್ಟು ಕೇಳಿಬಂದಿದ್ದವು. ಬೋಧನಾ ಸಮಯದಲ್ಲಿ ಮೊಬೈಲ್‍ನಲ್ಲಿ ಹರಟೆ ಹೊಡೆಯುವುದು, ವಾಟ್ಸಪ್ ಮಾಡುವುದು ಸೇರಿದಂತೆ ಮೊಬೈಲ್‍ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿಯು ಸಾಕಷ್ಟು ಬಾರಿ ಶಿಕ್ಷಕರಿಗೆ ಮೊಬೈಲ್ ಬಳಕೆ ಮಾಡದಂತೆ ಸೂಚಿಸಿದ್ದರು. ಆದರೆ ಇದಕ್ಕೆ ಕಡಿವಾಣ ಮಾತ್ರ ಬಿದ್ದಿರಲಿಲ್ಲ. ಈಗಿರುವ ಕಾನೂನಿನಲ್ಲಿ ಮೊಬೈಲ್ ಬಳಕೆ ಮಾಡಿದರೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿರಲಿಲ್ಲ.
ಇದಕ್ಕೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ಇಲಾಖೆ ಮೊಬೈಲ್ ಬಳಸದಂತೆ ನಿಬಂಧನೆ ಹಾಕಲಾಗಿದೆ. ಒಂದು ವೇಳೆ ಯಾವುದಾದರೂ ತುರ್ತು ಸಂದರ್ಭವಿದ್ದರೆ ಶಾಲೆಯ ಲ್ಯಾಂಡ್‍ಲೈನ್ ಫೆÇೀನ್ ಬಳಕೆ ಮಾಡಲು ಅವಕಾಶವಿದೆ.
ಆದರೆ ವಿದ್ಯಾರ್ಥಿಗಳಿಗೆ ಮೊಬೈಲ್‍ನ್ನು ಶಾಲೆಗೆ ತರಬೇಕೆ ಬೇಡವೆ ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ