ಬೆಂಗಳೂರಿನ ಆಶೋಕ ಹೋಟೆಲ್‍ನಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಸುದ್ಧಿಗೋಷ್ಠಿ: ಖಾತೆ ಹಂಚಿಕೆ

ಬೆಂಗಳೂರು: ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಸುದ್ಧಿ ಗೋಷ್ಠಿಯನ್ನು ಉದ್ದೇಶಿಸಿ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ್ ಮಾತನಾಡಿದರು. ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದೇವೆ, ಈಗಾಗಲೇ ನಾವು ಸರ್ಕಾರದ ಸ್ವರೂಪದ ಬಗ್ಗೆ ಚರ್ಚೆ ಮಾಡಿದ್ದೇವೆ, ಎಐಸಿಸಿ ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಖಾತೆ ಹಂಚಿಕೆ ಮಾಡಿಕೊಂಡಿದ್ದೇವೆ ಎಂದು ವೇಣುಗೋಪಾಲ್ ಹೇಳಿದರು.
ಕರ್ನಾಟಕದಲ್ಲಿ 2018ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನಲೆ, ಕಾಂಗ್ರೇಸ್ ಮತ್ತು ಜನತಾದಳ ಸೆಕ್ಯುಲರ್ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದವು.
ಸಮ್ಮಿಶ್ರ ಸರ್ಕಾರವು ಸುಗುಮವಾಗಿ ಆಡಳಿತ ನಡೆಸಲು ಮತ್ತು ಮಿತ್ರ ಪಕ್ಷಗಳಲ್ಲಿ ಯಾವುದೇ ಗೊಂದಲ ಮೂಡದಂತೆ ಇರಲು, ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಸಮನ್ವಯ ಸಮಿತಿಯು ತಿಂಗಳಗೊಮ್ಮೆ ಸಭೆ, ಆಗತ್ಯವಿದ್ದಲ್ಲಿ ಆಗಾಗ್ಗೆ ಸಭೆ ಸೇರಲಿದೆ ಎಂದು ವೇಣುಗೋಪಾಲ್ ಹೇಳಿದರು. ಈ ಸಮಿತಿಯ ಸಂಯೋಜನೆಯು ಕೆಳಗೆ ಸೂಚಿಸಿರುವ ಐದು ಜನರನ್ನು ಒಳಗೊಂಡಿದೆ.
1) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
2) ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
3) ಮಾಜಿ ಸಿ.ಎಂ. ಮತ್ತು ಹಾಲಿ ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ
4) ಕಾಂಗ್ರೀಸ್ ಉಸ್ತುವಾರಿ ಕೆ.ವೇಣುಗೋಪಾಲ್
5) ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ
ಮಾಜಿ ಸಿ.ಎಂ. ಸಿದ್ದರಾಮಯ್ಯ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ಜೆಡಿಎಸ್‍ನ ಡ್ಯಾನಿಶ್ ಆಲಿ ಈ ಸಮಿತಿಯ ಸಂಚಾಲಕರಾಗಿರುತ್ತಾರೆ.
ಪ್ರತಿ ತಿಂಗಳಿಗೊಮ್ಮೆ ಮಾಜಿ ಸಿ.ಎಂ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ, ಎರಡು ಪಕ್ಷಗಳಿಂದಲೂ ಒಬ್ಬೊಬ್ಬರು ವಕ್ತಾರರು ಇರುತ್ತಾರೆ. ನಿಗಮ ಮಂಡಳಿಗಳಿಗೆ 2.3 ರಷ್ಟು ಕಾಂಗ್ರೇಸ್‍ನಿಂದ ಮತ್ತು 1.3 ರಷ್ಟು ಜೆಡಿಎಸ್‍ನಿಂದ ನೇಮಕವಾಗಲಿದ್ದಾರೆ. ಈ ಕೆಳಕಂಡಂತೆ 2 ಪಕ್ಷಗಳು ಖಾತೆಗಳನ್ನು ಹಂಚಿಕೊಂಡಿವೆ.
ಕಾಂಗ್ರೇಸ್‍ಗೆ ಲಭಿಸಿರುವ ಖಾತೆಗಳು:
1) ಗೃಹ ಇಲಾಖೆ
2) ನೀರಾವರಿ
3) ಬೆಂಗಳೂರು ನಗರ ಅಭಿವೃದ್ಧಿ
4) ಬೃಹತ್ ಕೈಗಾರಿಕೆ ಮತ್ತು ಸಕ್ಕರೆ ಕ್ಯೆಗಾರಿಕೆ
5) ಆರೋಗ್ಯ
6) ಕಂದಾಯ ಮತ್ತು ಮುಜರಾಯಿ
7) ನಗರಾಭಿವೃದ್ಧಿ
8) ಗ್ರಾಮೀಣಾಭಿವೃದ್ಧಿ
9) ಕೃಷಿ
10) ವಸತಿ
11) ವ್ಯೇಧ್ಯಕೀಯ ಶಿಕ್ಷಣ
12) ಅರಣ್ಯ ಮತ್ತು ಪರಿಸರ
13) ಕಾರ್ಮಿಕ
14) ಗಣಿ ಮತ್ತು ಭೂವಿಜ್ಞಾನ
15) ಸಮಾಜ ಕಲ್ಯಾಣ
16) ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ
17) ಆಹಾರ ಮತ್ತು ನಾಗರಿಕ ಪೂರ್ಯೆಕೆ
18) ಅಲ್ಪ ಸಂಖ್ಯಾತ ಮತ್ತು ವಕ್ಫ್ ಮತ್ತು ಹಜ್
19) ಕಾನೂನು ಮತ್ತು ಸಂಸದೀಯ ವ್ಯವಹಾರ
20) ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿಬಿಟಿ
21) ಯುವ ಮತ್ತು ಕ್ರೀಡೆ ಮತ್ತು ಕನ್ನಡ ಸಂಸ್ಕøತಿ
22) ಬಂದರು ಹಾಗು ಒಳನಾಡಿನ ಸಾರಿಗೆ ಅಭಿವೃದ್ಧಿ
ಜನತಾದಳ (ಜೆಡಿಎಸ್) ಗೆ ಲಭಿಸಿರುವ ಖಾತೆಗಳು:
01) ಮಾಹಿತಿ ಮತ್ತು ತಂತ್ರಜ್ಞಾನ, ಯೋಜನೆಯ ಅಂಕಿಅಂಶಗಳು
02) ಹಣಕಾಸು ಮತ್ತು ಅಬ್ಕಾರಿ
03) ಲೋಕಪಯೋಗಿ
04) ಇಂಧನ
05) ಸಹಕಾರ
06) ಪ್ರವಾಸೋಧ್ಯಮ
07) ಶಿಕ್ಷಣ (ವ್ಯೇಧ್ಯಕೀಯ ಶಿಕ್ಷಣ ಹೊರತುಪಡಿಸಿ)
08) ಪಶು ಸಂಗೋಪನೆ ಮತ್ತು ಮೀನುಗಾರಿಕೆ
09) ತೋಟಗಾರಿಕೆ ಮತ್ತು ರೇಷ್ಮೆ ಕೃಷಿ
10) ಸಣ್ಣ ಕ್ಯೆಗಾರಿಕೆ
11) ಸಾರಿಗೆ
12) ಸಣ್ಣ ನೀರಾವರಿ
ಉಳಿದ ಖಾತೆಗಳನ್ನು ಸಿ.ಎಂ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿರ್ಧರಿಸುತ್ತಾರೆ.
—————————————————————————-

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ