ಬೆಂಗಳೂರು, ಮೇ 31-ರೋಗಿಗಳ ಪುನರ್ವಸತಿ, ಚಲನೆ ಮತ್ತು ಗೃಹ ಆರೋಗ್ಯ ಆರೈಕೆ ಪರಿಹಾರೋಪಾಯಗಳನ್ನು ನೀಡುವ ಪರಿಕಲ್ಪನೆಯ ದೇಶದ ಪ್ರಥಮ ಸಂಸ್ಥೆ ರೆಹಮೋ ಉದ್ಯಾನನಗರಿ ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದೆ.
ಮೈಕ್ರೋಲ್ಯಾಬ್ ಲಿಮಿಟೆಡ್ ಅಧ್ಯಕ್ಷ ದಿಲೀಪ್ ಸುರಾನ ರೆಹಮೋ ಸೇವಾ ಕೇಂದ್ರವನ್ನು ಅನಾವರಣಗೊಳಿಸಿದರು. ಶಾಸಕರಾದ ಎಸ್.ಸುರೇಶ್ ಕುಮಾರ್ ಮತ್ತು ಡಾ.ಅಶ್ವಥ್‍ನಾರಾಯಣ್ ಈ ಸಂದರ್ಭದಲ್ಲಿ ಹಾಜರಿದ್ದರು.
ರೋಗಿಗಳ ದಿನನಿತ್ಯದ ಅಗತ್ಯಗಳು, ವಯೋವೃದ್ದರು ಮತ್ತು ವಿಕಲಚೇತನರ ಚಲನೆ ಚಟುವಟಿಕೆಗಳು, ಹಾಗೂ ಮಕ್ಕಳ ಆರೋಗ್ಯ ಆರೈಕೆಗೆ ನೆರವಾಗುತ್ತಿರುವ ಈ ಸಂಸ್ಥೆಯ ಸೇವೆಗಳನ್ನು ಗಣ್ಯರು ಪ್ರಶಂಸಿದರು.
ರೆಹಮೋದಲ್ಲಿ ಸಮರ್ಪಣಾ ಮತ್ತು ಸೇವಾ ಮನೋಭಾವದ ಸಿಬ್ಬಂದಿ ಇದ್ದು ರೋಗಿಗಳ ಪುನರ್ವಸತಿ, ಚಲನೆ ಮತ್ತು ಗೃಹ ಆರೋಗ್ಯ ಆರೈಕೆಗೆ ಅತ್ಯುತ್ತಮ ರೀತಿಯಲ್ಲಿ ಸಹಾಯ ಒದಗಿಸುತ್ತಾರೆ.
ಕ್ಯಾನ್ಸರ್, ಪಾಶ್ರ್ವವಾಯು, ಬೆನ್ನಿನ ತಟ್ಟೆಲುಬು ಪೆಟ್ಟು, ಸಂಧಿವಾತ, ಅಲ್‍ಜೈಮರ್, ಅಪಘಾತ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಮನೆಯಲ್ಲಿಯೇ ಉತ್ಕøಷ್ಟ ಗುಣಮಟ್ಟದ ಚಿಕಿತ್ಸೆ ಮತ್ತು ಉಪಚಾರ ಮಾಡುತ್ತದೆ. ರೋಗಿಗಳು ಯಾರನ್ನೂ ಅವಲಂಬಿಸದೇ ದಿನನಿತ್ಯದ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಶೀಘ್ರ ಚೇತರಿಸಿಕೊಳ್ಳುವಂತೆ ಮಾಡುವ ನುರಿತ ವೈದ್ಯಕೀಯ ತಂಡವನ್ನು ರಹಮೋ ಹೊಂದಿದೆ ಎಂದು ಸಂಸ್ಥೆಯ ಸಂಸ್ಥಾಪನಾ ಪಾಲುದಾರ ಸುನಿಲ್ ಭಪ್ನಾ ಹೇಳುತ್ತಾರೆ.
ಬೆಂಗಳೂರಿನ ಜನರಿಗೆ ಇಂಥ ಸೇವೆಗಳ ಅಗತ್ಯವಿದೆ. 2020ರ ವೇಳೆಗೆ ದೇಶದ ಇತರ ನಗರಗಳಿಗೂ ರೆಹಮೋ ಸೇವೆ ವಿಸ್ತರಣೆಯಾಗಲಿದೆ.