ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ, ತನಿಖೆ ತೀವ್ರ

ನವದೆಹಲಿ, ಮೇ 31-ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 14,356 ಕೋಟಿ ರೂ.ಗಳ (2.1 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಅಕ್ರಮ ವಹಿವಾಟು ಕುರಿತು ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತೀವ್ರಗೊಳಿಸಿದೆ. ಈ ಹಗರಣದ ಪ್ರಮುಖ ಆರೋಪಿ ಮತ್ತು ಮಾಜಿ ವಜ್ರ ವ್ಯಾಪಾರಿ ನೀರವ್ ಮೋದಿಗೆ ಕುಟುಂಬದ ಒಡೆತನದಲ್ಲಿರುವ ರಾಜಸ್ತಾನ ಪವನ ವಿದ್ಯುತ್ ಸ್ಥಾವರ(ವಿಂಡರ್ ಪವರ್ ಪ್ಲಾಂಟ್)ವನ್ನು ಇಡಿ ಅಡಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ಧಾರೆ.
ಜೈಸಲ್ಮೇರ್‍ನಲ್ಲಿರುವ ಗಾಳಿ ವಿದ್ಯುತ್ ಘಟಕವು 52.80 ಕೋಟಿ ರೂ. ಮೌಲ್ಯ ಹೊಂದಿದೆ. ಇದು 9.6 ಮೆ.ವಾ. ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಹೊಂದಿದೆ. ಅಕ್ರಮ ಹಣ ವಹಿವಾಟು ಕಾಯ್ದೆ ಅಡಿ ಪವನ ವಿದ್ಯುತ್ ಸ್ಥಾವರ ಜಪ್ತಿ ಮಾಡಲು ಆದೇಶ ಹೊರಬಿದ್ದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ನೀರವ್ ಕುಟುಂಬದ ಒಡೆತನದಲ್ಲಿರುವ ಸೋಲಾರ್ ಎಕ್ಸ್‍ಪೆÇೀಟ್ರ್ಸ್, ಸ್ಟೆಲ್ಲರ್ ಡೈಮಂಡ್ಸ್, ಡೈಮಂಡ್ಸ್ ಆರ್ ಯುಎಸ್ ಹಾಗೂ ನಿಶಾಲ್ ಮರ್ಕಂಡೈಸಿಂಗ್ ಪ್ರೈ.ಲಿ. ಸಂಸ್ಥೆಗಳಲ್ಲಿ ಮೊದಲ ಮೂರು ಸಂಸ್ಥೆಗಳು ಬಹುಕೋಟಿ ರೂ.ಗಳ ಪಿಎನ್‍ಬಿ ವಂಚನೆ ಹಗರಣದಲ್ಲಿ ಶಾಮೀಲಾಗಿವೆ. ಇಡಿ ಅಧಿಕಾರಿಗಳು ಈವರೆಗೆ ನೀರವ್ ಮೋದಿಗೆ ಸೇರಿದ 691 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ