
ದೆಹಲಿ ಮೇ 31: ದೇಶದ ಆರ್ಥಿಕ ಬೆಳವಣಿಗೆ ಮತ್ತೆ 7 ಅಂಕಗಳಷ್ಟು ಬೆಳವಣಿಗೆ ಕಂಡಿದೆ. ಈ ವರ್ಷದ (17-18) ತ್ರ್ಯೆಮಾಸಿಕ ವರದಿಯಲ್ಲಿ ಶೇ 5.6 ರಿಂದ 6.3 ಹಾಗೂ ಶೇ 7ರಷ್ಟು ಮೊದಲ ಮೂರು ಹಂತಗಳಲ್ಲಿ ಚೇತರಿಕೆ ಕಂಡಿತ್ತು. ಇಂದು ಅಂಕಿಸಂಖ್ಯೆ ಕೇಂದ್ರ ಕಚೇರಿ ಬಿಡುಗಡೆ ಮಾಡಿದಂತೆ ಸೇವಾವಲಯದ ವಿಶೇಷ ಕೊಡುಗೆಯ ಹಿನ್ನಲೆಯಲ್ಲಿ ಕೊನೆ ತ್ರ್ಯೆಮಾಸಿಕ ವರದಿಯಂತೆ ಶೇ 7.1 ರಷ್ಟು ಆರ್ಥಿಕ ಬೆಳವಣಿಗೆ ಏರಿಕೆಯಾಗಿದೆ.
ಕಳೆದ ವರ್ಷದ ಶೇ ಜಿಡಿಪಿ ಶೇ 8.1 ರಷ್ಟಿತ್ತು, ಅದರೆ ಕೊನೆಯ ತ್ರ್ಯೆಮಾಸಿಕದಲ್ಲಿ ಜಿಡಿಪಿ ಶೇ 6.1ಕ್ಕೆ ಕುಸಿದಿತ್ತು, ಅದರೆ ಹೊಸ ಹಣಕಾಸು ವರ್ಷದ ಆರಂಭದಲ್ಲಿಯೂ ಕೂಡ ಶೇ 7.5 ಕ್ಕೆ ಏರಿಕೆಯಾಗಿದ್ದ ಜಿಡಿಪಿ ಆರಂಭದಲ್ಲಿಯು ಬದಲಾವಣೆಯಾಗಿಲ್ಲ ಎಂಬುದು ಗಮನಾರ್ಹವಾಗಿದೆ.