ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ

The Prime Minister, Shri Narendra Modi meeting the Prime Minister of Singapore, Mr. Lee Hsien Loong, in Istana, Singapore on November 24, 2015.

ದೆಹಲಿ ಮೇ 31: ಪ್ರಧಾನಮಂತ್ರಿ ನರೇಂದ್ರ ಮೋದಿ ಸಿಂಗಾಪುರದಲ್ಲಿಂದು ಅಂತಾರಾಷ್ಟ್ರೀಯ ರುಪಿಯಾ ಕಾರ್ಡ್ ಹಾಗೂ ಬೀಮ್ ಆಪ್ ಬಿಡುಗಡೆ ಮಾಡಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ವ್ಯವಸ್ಥೆಗೆ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾದ ಈ ವ್ಯವಸ್ಥೆಯಲ್ಲಿ ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಸಿಂಗಾಪುರದ ಮರೀನಾ ಬೆ ಸಮಾವೇಶ ಕೇಂದ್ರದಲ್ಲಿ ಭಾರೀ ಪ್ರಮಾಣದಲ್ಲಿ ನೆರೆದಿದ್ದ ಭಾರತೀಯ ಉದ್ದಿಮೆದಾರರು ಮತ್ತು ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯರ ವೈವಿಧ್ಯತೆ ಸಿಂಗಾಪುರದಲ್ಲಿ ಪ್ರತಿಬಿಂಬಿತವಾಗುತ್ತಿದೆ. ಸಿಂಗಾಪುರದ ಅಭಿವೃದ್ಧಿಯಲ್ಲಿ ಭಾರತೀಯರು ಭಾಗಿದಾರರಾಗಿದ್ದಾರೆ. ಭಾರತ ಜಗತ್ತಿಗೆ ತೆರೆದುಕೊಂಡ ಹಾಗೂ ಪೂರ್ವದತ್ತ ನೋಡುವ ನೀತಿ ಜಾರಿಗೆ ಬಂದ ನಂತರ ಸಿಂಗಾಪುರ ಭಾರತದ ಪ್ರಮುಖ ಸಹಭಾಗಿ ರಾಷ್ಟ್ರವಾಯಿತು ಹಾಗೂ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳಿಗೆ ಸಿಂಗಾಪುರ ಸಂಪರ್ಕ ಸೇತುವಾಯಿತು ಎಂದು ಅಭಿಪ್ರಾಯಪಟ್ಟರು.

ಬಹು ಸಂಸ್ಕøತಿಯ ಸಮಾಜವರ್ಗವಿರುವುದೇ ಸಿಂಗಾಪುರದ ಯಶಸ್ಸಿಗೆ ಮೂಲ ಕಾರಣವಾಗಿದೆ. ಭಾರತ-ಸಿಂಗಾಪುರ ನಡುವೆ ಆಪ್ತ ಹಾಗೂ ಉತ್ಸಾಹದಾಯಕ ಬಾಂಧವ್ಯವಿದೆ. ಇದು ನಿಸರ್ಗದತ್ತ ಸಹಭಾಗಿತ್ವ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು.

ರಕ್ಷಣಾ ಕ್ಷೇತ್ರದ ಸಹಭಾಗಿತ್ವ ಅತ್ಯಂತ ಬಲಿಷ್ಠವಾಗಿದ್ದು, ಇದು ಎರಡೂ ರಾಷ್ಟ್ರಗಳಿಗೂ ಅಗತ್ಯವಾಗಿದೆ. ಭಾರತದಲ್ಲಿನ ಪರಿಸ್ಥಿತಿ ಗಣನೀಯವಾಗಿ ಸುಧಾರಣೆಯಾಗುತ್ತಿದ್ದು, ನವಭಾರತ ಸ್ಪಷ್ಟ ಸ್ವರೂಪ ಪಡೆಯುತ್ತಿದೆ. ಮೂಲಸೌಕರ್ಯ ವಲಯದಲ್ಲಿ ವೇಗದಲ್ಲಿ ಬೆಳವಣಿಗೆಯಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ