ಆನೇಕಲ್, ಮೇ. 30- ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರು ಮಂದಿ ಅಂತಾರಾಜ್ಯ ಡಕಾಯಿತರನ್ನು ಸೂರ್ಯನಗರ ಪೆÇೀಲಿಸರು ಬಂಧಿಸಿದ್ದಾರೆ.
ಕೇಶವನ್ (35) ಸತೀಶ್ (34) ಇಮ್ರಾನ್ (23), ರವಿ (29). ಶರವಣ(28), ವಿಜಯ್ (23) ಬಂಧಿತರು. ಸುರೇಶ್ ಹಾಗೂ ರಾಜು ತಲೆ ಮರೆಸಿಕೊಂಡಿದ್ದು ಇವರೆಲ್ಲರೂ ತಮಿಳು ನಾಡಿನ ನಿವಾಸಿಗಳಾಗಿದ್ದಾರೆ.
ಬಂಧಿತರು ಸೂರ್ಯನಗರ ಪೆÇೀಲಿಸ್ ಠಾಣೆಯ ವ್ಯಾಪ್ತಿಯ ರಾಮಸಾಗರ ಗ್ರಾಮದ ಡೈರಿ ನಾರಾಯಣರೆಡ್ಡಿ ಎಂಬುವರ ಮನೆಗೆ ನುಗ್ಗಿ, ಪತ್ನಿ ಹಾಗೂ ಮಕ್ಕಳನ್ನು ಬೆದರಿಸಿ ಅವರ ಮೇಲೆ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಚಿನ್ನದ ಚೈನ್ ಎರಡು ಮೊಬೈಲ್ ದರೋಡೆ ಮಾಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಸತೀಶ್ನನ್ನು ಪೆÇೀಲಿಸರು ತೀವ್ರವಾಗಿ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಅನುಗೊಂಡನಹಳ್ಳಿ ಪೆÇೀಲಿಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸ್ ರೆಡ್ಡಿ ಎಂಬುವರ ಮನೆಗೆ ಇದೇ ತಂಡ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು ಜೊತೆಗೆ ತಮಿಳುನಾಡಿನ ವಿವಿಧ ಪೆÇೀಲಿಸ್ ಠಾಣೆಗಳಲ್ಲಿ ಇವರ ಮೇಲೆ ಡಕಾಯಿತಿ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದೆ.
ಬಂದಿತ ಆರೋಪಿಗಳಿಂದ 3.5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಜಿಲ್ಲಾ ಅಪರ ಪೆÇೀಲಿಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಉಮೇಶ್, ಸೂರ್ಯನಗರ ಪೆÇೀಲಿಸ್ ಠಾಣೆಯ ವೃತ್ತ ನಿರೀಕ್ಷಕ ಆನಂದ್ ನಾಯ್ಕ್ ನೇತೃತ್ವದಲ್ಲಿ ಪಿಎಸ್.ಐ ಪುಟ್ಟ ಸ್ವಾಮಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.