ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

ದಾವಣಗೆರೆ, ಮೇ 30-ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಆರೋಪ ಸಾಬೀತಾಗುವ ಆತಂಕದಲ್ಲಿ ಜೈಲಿನ ಆವರಣದಲ್ಲಿರುವ ತೆಂಗಿನ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಹನುಮಂತ (26) ಆತ್ಮಹತ್ಯೆ ಮಾಡಿಕೊಂಡಿರುವ ಕೈದಿ. ಈತ ಕಳೆದ 2ತಿಂಗಳ ಹಿಂದೆ ಕೊಲೆ ಯತ್ನ ಆರೋಪದ ಮೇಲೆ ಜೈಲು ಸೇರಿದ್ದ.
ಹನುಮಂತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ.
ಜೂ.1 ರಂದು ತೀರ್ಪು ಪ್ರಕಟವಾಗಲಿದ್ದು, ಆರೋಪ ಸಾಬೀತಾಗುತ್ತದೆ ಎಂಬ ಆತಂಕಕ್ಕೊಳಗಾಗಿ ತಾನು ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿ, ಜೈಲಿನ ಆವರಣದಲ್ಲಿರುವ 30 ಅಡಿ ಎತ್ತರದ ತೆಂಗಿನ ಮರವೇರಿ ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿಯಲು ಮುಂದಾದ. ಬೇರೆ ಕೈದಿಗಳು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ಅಧಿಕಾರಿಗಳು, ಪೆÇಲೀಸರು, ಅಗ್ನಿಶಾಮಕ ದಳದವರು ಧಾವಿಸಿ ತೆಂಗಿನ ಮರದ ಕೆಳಗೆ ಬಲೆ ಕಟ್ಟಿದ್ದರು.
ಆದರೂ ಹನುಮಂತ ಕಾಲು ಜಾರಿದಂತೆ ಮಾಡಿ ತಲೆಕೆಳಗಾಗಿ ಬಲೆಯ ಹೊರಗಡೆ ಬಿದ್ದು ತೀವ್ರವಾಗಿ ಗಾಯಗೊಂಡ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಣೆ. ಬಸವನಗರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ