ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿಯನ್ನು ಬಿಜೆಪಿಯವರು ಮುರಿಯಲು ಸಾಧ್ಯವಿಲ್ಲ -ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ತುಮಕೂರು, ಮೇ 30- ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿಯನ್ನು ಬಿಜೆಪಿಯವರು ಮುರಿಯಲು ಸಾಧ್ಯವಿಲ್ಲ. ನಾವು ಐದು ವರ್ಷಗಳ ಕಾಲ ಅಧಿಕಾರವನ್ನು ಪೂರ್ಣಗೊಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರ ಆಶೀರ್ವಾದ ಪಡೆದು ಶ್ರೀಯವರೂಂದಿಗೆ ಪ್ರಸಕ್ತ ವಿಧ್ಯಮಾನಗಳ ಬಗ್ಗೆ ಚರ್ಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಎಂ ಆದ ಬಳಿಕ ಮೊದಲ ಬಾರಿ ಶ್ರೀಗಳ ಆಶಿರ್ವಾದ ಪಡೆದಿದ್ದೇನೆ. ನನಗೆ ಅನೆ ಬಲ ಬಂದಂತ್ತಾಗಿದೆ. ಪ್ರತಿ ಬಾರಿಯೂ ಮಠಕ್ಕೆ ಬಂದು ಶ್ರೀಯವರ ಆಶೀರ್ವಾದ ಪಡೆದು ನಂತರ ಮುಂದೆ ಸಾಗುವುದು ವಾಡಿಕೆ ಎಂದರು.
ಬಿಜೆಪಿಯವರಿಂದ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಹಾಗೂ ಅಧಿಕಾರ ಕೊಡಲು ಸಾಧ್ಯವಾಗಿಲ್ಲ. ಇವರು ರಾಜ್ಯದ ಸಂಪತ್ತುಗಳನ್ನು ಲೂಟಿ ಮಾಡಲೂ ತುದಿಗಾಲಲ್ಲಿ ನಿಂತಿದ್ದರು. ಅದರೆ, ಅವರ ವೇಗಕ್ಕೆ ನಾವು ಅವಕಾಶ ನೀಡಲಿಲ್ಲ. ಆದ್ದರಿಂದ ಬಿಜೆಪಿಯವರು ಭ್ರಮನಿರಸ ಕೊಂಡಿದ್ದಾರೆ ಎಂದು ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಉತ್ತಮ ಸರ್ಕಾರ ಸಾರ್ವಜನಿಕರಿಗೆ ಸಿಗಬೇಕು. ಆಗಾಗಿ ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡೆವು. ಕೆಲವು ಗೊಂದಲಗಳ ಬಗ್ಗೆ ಪಕ್ಷದ ಹಿರಿಯ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಂದೆರಡು ದಿನಗಳಲ್ಲಿ ಸಂಪುಟ ರಚನೆ ವಿಚಾರ ಬಗೆ ಹರಿಯಲಿದೆ. ಇದರಲ್ಲಿ ಆತಂಕ ಬೇಡ. ನಾವು ಜೆಡಿಎಸ್ ಪಕ್ಷದವರಿಗೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಯಾವುದೇ ಷರತ್ತು ಹಾಕಿಲ್ಲ. ಇದೇಲ್ಲಾ ವೂಹಾಪೆÇೀಹ ಎಂದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಡಾ.ರಫೀಕ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆಂಚಮಾರಯ್ಯ, ಅರ್.ನಾರಯಣ್, ಕೆಎಂಎಫ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮತ್ತಿರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ