
ತಿರುಪತಿ, ಮೇ 29- ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಭಕ್ತರೊಬ್ಬರು 2 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗವನ್ನು ಕೊಡುಗೆಯಾಗಿ ಸಮರ್ಪಿ ಸಿದ್ದಾರೆ. 6 ಕೆಜಿ ತೂಕದ ಈ ಬಂಗಾರದ ಖಡ್ಗ 3.5 ಅಡಿ ಉದ್ದವಿದೆ. ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಈ ಖಡ್ಗವನ್ನು ತಮಿಳುನಾಡಿನ ಭಕ್ತ ಉದ್ಯಮಿಯೊಬ್ಬರು ಟಿಟಿಡಿ ದೇಗುಲಕ್ಕೆ ಸಮರ್ಪಿಸಿದರು.