ಸೈಕೋ ಕಿಲ್ಲರ್ ಪೊಲೀಸ ವಶಕ್ಕೆ: ತೀವ್ರ ವಿಚಾರಣೆ

ಬೆಂಗಳೂರು, ಮೇ 29-ತಮಿಳುನಾಡು ಮೂಲದ ಸೈಕೋ ಕಿಲ್ಲರ್‍ವೊಬ್ಬನನ್ನು ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯರನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಅವರ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗುವುದು ಈತನ ಶೈಲಿ ಎಂದು ಪೆÇಲೀಸರು ತಿಳಿಸಿದ್ದಾರೆ.
ಸುಮಾರು 50 ವರ್ಷದ ಸೈಕೋ ಕಿಲ್ಲರ್ 8ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದಲ್ಲದೆ, ಕೊಲೆ ಮಾಡಿದ್ದಾನೆಂಬುದು ತಿಳಿದು ಬಂದಿದೆ.

ಈ ಸೈಕೋ ಕಿಲ್ಲರ್ ಬ್ಯಾಡರಹಳ್ಳಿ, ಪೀಣ್ಯ, ಯಶವಂತಪುರ ಮುಂತಾದ ಸ್ಥಳಗಳಲ್ಲಿ ಕೃತ್ಯವೆಸಗಿದ್ದಾನೆ ಎಂಬುದು ಪೆÇಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಬ್ಯಾಡರಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಸತ್ಯನಾರಾಯಣ ಮತ್ತು ಸಿಬ್ಬಂದಿ ಸೈಕೋ ಕಿಲ್ಲರ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಈತ ನಡೆಸಿರುವ ಇನ್ನಷ್ಟು ಕೃತ್ಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಎಲ್ಲೆಲ್ಲಿ ಈತ ಕೃತ್ಯ ನಡೆಸಿದ್ದಾನೆ ಎಂಬ ಬಗ್ಗೆಯೂ ಪೆÇಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬ್ಯಾಡರಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ನಂತರ ಈತನ ಸುಳಿವು ದೊರೆತಿದೆ.
ನಂತರ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ