ಮಂತ್ರಿಗಿರಿಗಾಗಿ ಕಾಂಗ್ರೆಸ್ ನಾಯಕರ ಲಾಬಿ: ಆರು ಶಾಸಕರಿಗೆ ಸಚಿವರಾಗಲು ಹೈಕಮಾಂಡ್ ಒಪ್ಪಿಗೆ

ಬೆಂಗಳೂರು: ಮೇ-29: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ರಚನೆ ವಿಳಂಬವಾಗುತ್ತಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವು ಕಾಂಗ್ರೆಸ್ ನಾಯಕರು ಮಂತ್ರಿಗಿರಿಗಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದಾರೆ. ರಾಜ್ಯ ನಾಯಕರು ತಯಾರಿಸಿರುವ ಸಚಿವರ ಪಟ್ಟಿಯ ಕೆಲವು ಶಾಸಕರಿಗೆ ಹೈಕಮಾಂಡ್ ಈಗಾಗಲೇ ಅನುಮತಿ ನೀಡಿದೆ ಎನ್ನಲಾಗಿದೆ.

ಆರು ಶಾಸಕರಿಗೆ ಸಚಿವರಾಗಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರುಗಳಾಗಿದ್ದ ಶಿವನಾಂದ ಪಾಟೀಲ್, ಪ್ರಿಯಾಂಕ್ ಖರ್ಗೆ, ಯು.ಟಿ ಖಾದರ್, ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ಕೆ.ಎಚ್ ಮುನಿಯಪ್ಪ ಪುತ್ರಿ ರೂಪಕಲಾ ಶಶಿಧರ್, ಸ್ವತಂತ್ರ್ಯ ಅಭ್ಯರ್ಥಿ ಆರ್. ಶಂಕರ್ ಅವರುಗಳಿಗೆ ಸಚಿವ ಸ್ಥಾನ ನೀಡಲು ಗ್ರೀನ್ ಸಿಗ್ನಲ್ ದೊರಕಿದೆ.
ಇನ್ನೂ ಹಿರಿಯ ನಾಯಕರುಗಳಾದ ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್.ಎಂ.ಬಿ ಪಾಟೀಲ್ ಮತ್ತು ಎಸ್ .ಆರ್ ಪಾಟೀಲ್ ಅವರುಗಳಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕೆ.ಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಹುದ್ದೆಯನ್ನು ನೀಡಬೇಕು ಎಂದು, ಡಿ.ಕೆ ಶಿವಕುಮಾರ್ ಕೋರಿದ್ದಾರೆ ಎಂದು ತಿಳಿದು ಬಂದಿದೆ. ಜಾತಿ , ಸಮುದಾಯ ಹಾಗೂ ಜಿಲ್ಲಾವಾರು ಪ್ರಾತಿನಿದ್ಯದ ಆಧಾರದ ಮೇಲೆ ಸಂಪುಟ ಹಂಚಿಕೆ ಮಾಡಲು ಕಾಂಗ್ರೆಸ್ ಕಸರತ್ತು ನಡೆಸಿದೆ,

ಇನ್ನು ಕಾಂಗ್ರೆಸ್ ನ ಸಂಭಾವ್ಯ ಸಚಿವರುಗಳ ಪಟ್ಟಿ ಹೀಗಿದೆ:
ಪಿ,.ಟಿ ಪರಮೇಶ್ವರ್ ನಾಯಕ್- ಹಡಗಲಿ
ಶಿವಾನಂದ ಪಾಟೀಲ್- ಬಸವನ ಬಾಗೇವಾಡಿ
ರಾಜಶೇಖರ್ ಪಾಟೀಲ್- ಹುಮ್ನಾಬಾದ್
ಬಿ.ಕೆ ಸಂಗಮೇಶ್ವರ್ – ಭದ್ರಾವತಿ
ಆರ್. ಶಂಕರ್- ಸ್ವತಂತ್ರ್ಯ ಶಾಸಕ ರಾಣೆ, ಬೆನ್ನೂರು
ರೂಪಕಲಾ ಎಂ- ಕೆಜಿಎಫ್
ಪ್ರಿಯಾಂಕ್ ಖರ್ಗೆ- ಚಿತ್ತಾಪುರ
ಯು.ಟಿ ಖಾದರ್- ಮಂಗಳೂರು
ಸತೀಶ್ ಜಾರಕಿಹೊಳಿ- ಯಮನಕರಡಿ
ಡಿ.ಕೆ ಶಿವಕುಮಾರ್- ಕನಕಪುರ
ಸಿಎಸ್ ಶಿವಾಲಿ- ಕುಂದಗೋಳ

ಸಚಿವ ಸ್ಥಾನಕ್ಕೆ ಪರಿಗಣಿಸಲ್ಪಟ್ಟಿರುವ ಶಾಸಕರು:
ದಿನೇಶ್ ಗುಂಡೂರಾವ್- ಗಾಂಧಿನಗರ
ಆರ್.ವಿ ದೇಶಪಾಂಡೆ, – ಹಳಿಯಾಳ
ಕೆ,ಜೆ ಜಾರ್ಜ್- ಸರ್ವಜ್ಞ ನಗರ
ಎಚ್. ನಾಗೇಶ್- ಸ್ವತಂತ್ರ್ಯ ಶಾಸಕ, ಮುಳಬಾಗಿಲು
ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್
ಡಾ.ಕೆ. ಸುಧಾಕರ್- ಚಿಕ್ಕಬಳ್ಳಾಪುರ
ರೋಷನ್ ಬೇಗ್- ಶಿವಾಜಿನಗರ
ಟಿ.ರಘುಮೂರ್ತಿ-ಚಳ್ಳಕೆರೆ
ಕೃಷ್ಣ ಬೈರೇಗೌಡ- ಬ್ಯಾಟರಾಯನಪುರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ