ಪ್ಯಾಕೇಜ್ ಟೆಂಡರ್‍ನ್ನು ರದ್ದುಗೊಳಿಸುವಂತೆ ಕರ್ನಾಟಕ ದಲಿತ ಸಂಘದ ಸಮಿತಿ ಒತ್ತಾಯ

 

ಬೆಂಗಳೂರು, ಮೇ 28- ಪ್ಯಾಕೇಜ್ ಟೆಂಡರ್‍ನ್ನು ರದ್ದುಗೊಳಿಸುವಂತೆ ಕರ್ನಾಟಕ ದಲಿತ ಸಂಘದ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸರ್ಕಾರ ಕೈಗೊಳ್ಳುವ ಕಾಮಗಾರಿಯಲ್ಲಿ ಸಣ್ಣಪುಟ್ಟ ಟೆಂಡರ್ ಕರೆಯದೇ ಎಲ್ಲವನ್ನು ಒಗ್ಗೂಡಿಸಿ ಪ್ಯಾಕೇಜ್ ಟೆಂಡರ್ ಕರೆಯುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿಯು ಉದ್ಯಾನವನ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿಗಳ ಗುತ್ತಿಗೆ ಟೆಂಡರ್‍ನಲ್ಲಿಯೂ ಎರಡು ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಟೆಂಡರ್ ಕರೆದು ಪರಿಶಿಷ್ಟ ಜಾತಿ ಪಂಗಡದವರು ಭಾಗವಹಿಸಲು ಅವಕಾಶ ದೊರಕದಂತೆ ಮಾಡಲಾಗುತ್ತಿದೆ ಎಂದರು.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂ. ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ಅಡಿ ನಡೆಸಿದ ವಹಿವಾಟು ಅನುಭವ ಹಾಗೂ ಕಠಿಣ ಸ್ವರೂಪದ ಟೆಂಡರ್ ಷರತ್ತುಗಳನ್ನು ವಿಧಿಸಿ ಟೆಂಡರ್ ಕರೆಯಲಾಗುತ್ತಿದೆ.
ಪಾಲಿಕೆಯ ಟೆಂಡರ್‍ನಲ್ಲಿ ವಿಧಿಸುವ ಷರತ್ತು ಅನುಭವ ಮತ್ತು ವಹಿವಾಟಿನ ದಾಖಲೆ ಪೂರೈಕೆ ಮಾಡುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಕಷ್ಟಕರವಾಗಿರುತ್ತದೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ಗುತ್ತಿಗೆದಾರರು ಆರ್ಥಿಕ ಹಾಗೂ ತಾಂತ್ರಿಕವಾಗಿ ಹಿಂದುಳಿದಿರುವುದರಿಂದ ಇಂತಹ ಟೆಂಡರ್ ಷರತ್ತು ಪೂರ್ಣಗೊಳಿಸಲಾಗದೆ ಕೆಲಸ ಕಳೆದುಕೊಳ್ಳುವಂತವಾಗಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ