ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮೊಚಾಡೊ ಪದಗ್ರಹಣ ಕಾರ್ಯಕ್ರಮಕ್ಕೆ ವಿರೋಧ: ಮೇ 31ರಂದು ಉಪವಾಸ ಸತ್ಯಾಗ್ರಹ

ಬೆಂಗಳೂರು,ಮೇ 28- ಕೊಂಕಣಿ ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮೊಚಾಡೊ ಪದಗ್ರಹಣ ಕಾರ್ಯಕ್ರಮ ಬಹಿಷ್ಕರಿಸಿ ಇದೇ 31ರಂದು ಬೆಂಗಳೂರಿನ ಕೊಲ್ಸ್ ಪಾರ್ಕ್ ಬಳಿ ಇರುವ ಕೆಥಡ್ರಾಲ್‍ನ ಸಂತ ಫ್ರಾನ್ಸಿಸ್ ಗ್ಸೇವಿಯರ್ ಚರ್ಚ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಕಣಿ ಬ್ರಾಹ್ಮಣರು ಕ್ರೈಸ್ತರು ಆರ್ಚ್ ಡಯಾಸಿಸ್ ಬುಡಕಟ್ಟು ಜನಾಂಗದ ಕನ್ನಡ ಸಂಸ್ಕøತಿ ಭಾಷೆ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೊಂಕಣಿ ಕ್ರೈಸ್ತ ಬ್ರಾಹ್ಮಣರ ಕುತಂತ್ರವನ್ನು ಧರ್ಮಸಭೆ ಅರ್ಥ ಮಾಡಿಕೊಂಡಿಲ್ಲ. ಈ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡಲು ಮುಂದಾಗುವವರಿಗೂ ಕೊಂಕಣಿ ಕ್ರೈಸ್ತ ಧರ್ಮಾಧಿಕಾರಿ ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಅವರು ಧರ್ಮಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಸೂಕ್ತ ವ್ಯಕ್ತಿಯಲ್ಲ.

ಈಗಾಗಲೇ ಕೊಂಕಣಿ ಧರ್ಮಾಧಿಕಾರಿಗಳು 7 ಮಂದಿ ಇದ್ದರೂ ಕೊಂಕಣಿ ಧರ್ಮಾಧ್ಯಕ್ಷರನ್ನು ಬೆಂಗಳೂರಿಗೆ ನೇಮಕ ಮಾಡಿ ಸ್ಥಳೀಯ ಕ್ರೈಸ್ತರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಮಹಾ ಧರ್ಮಾಧಿಕಾರಿ ನೇಮಕಾತಿ ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ