ವಸ್ತುಪ್ರದರ್ಶನ ಮತ್ತು ಮೇಳದಲ್ಲಿ ಜೈಂಟ್ ವೀಲ್‍ನ ಟ್ರೋಲಿ ಕಳಚಿ ಬಾಲಕಿಯೊಬ್ಬಳು ಮೃತ!

ಅನಂತಪುರ್, ಮೇ 28-ಜೈಂಟ್ ಮೇರಿ-ಗೌ-ರೌಂಡ್ ವೀಲ್ ದುರಂತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟು, ಆರು ಮಕ್ಕಳು ತೀವ್ರ ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸ್ಥಳೀಯ ಮೇಳವೊಂದರಲ್ಲಿ ಸಂಭವಿಸಿದೆ. ಸ್ಥಳೀಯ ಜನಪ್ರಿಯ ವಸ್ತುಪ್ರದರ್ಶನ ಮತ್ತು ಮೇಳದಲ್ಲಿ ಜೈಂಟ್ ವೀಲ್‍ನ ಟ್ರೋಲಿ ಕಾರಿನ ಬೋಲ್ಟ್ ಕಳಚಿ ತೂಗುತೊಟ್ಟಿಲು ಕೆಳಗೆ ಬಿತ್ತು. ಈ ದುರಂತದಲ್ಲಿ ಅಮೃತಾ (10) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇತರ ಆರು ಮಕ್ಕಳಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಅನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೈಂಟ್ ವೀಲ್‍ನಲ್ಲಿ ಮಕ್ಕಳು ಸಂಭ್ರಮಿಸುರುವುದನ್ನು ನೋಡುತ್ತಾ ಪೆÇೀಷಕರು ಸಂತೋಷಪಡುತ್ತಿದ್ದರು. ಆದರೆ ಕೆಲವೇ ಸೆಕೆಂಡುಗಳಲ್ಲಿ ನಡೆದ ದುರಂತದಿಂದ ಶೋಕದ ಮಡುಗಟ್ಟಿತು.
ಪೆÇಲೀಸರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ