ದೆಹಲಿ ಮೇ 26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನಲೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ಧಿಗೋಷ್ಠಿ ನಡೆಸಿದರು. ಪ್ರಧಾನಿ ಮೋದಿ, ಸಂಸತ್ ಸದಸ್ಯರು ಮತ್ತು ಕಾರ್ಯಕರ್ತರುಗಳಿಗೆ ಅಮಿತ್ ಶಾ ಶುಭಾಶಯ ಕೋರಿದರು.
ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಜನರಿಗೆ ತಲುಪಿಸಿದ್ದಾರೆ, ಮೋದಿ ಸರ್ಕಾರ ಪಾರದರ್ಶಕ ಮತ್ತು ಭ್ರಷ್ಟಚಾರರಹಿತ ಆಡಳಿತ ನಡೆಸಿದೆ. ಜನರಿಗೆ ಬೇಡಿಕೆಗಳನ್ನು ಈಡೇರಿಸಲು ಸತತ ಪ್ರಯತ್ನ ಮಾಡುತ್ತಿದ್ದೇವೆ, ಬಡವರು, ರ್ಯೆತರು ಮತ್ತು ಗ್ರಾಮಗಳ ಅಭಿವೃದ್ದಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಅಮಿತ್ ಶಾ ಹೇಳಿದರು.
ಮೋದಿ ಸರ್ಕಾರ ರಚನೆಯಾದಾಗ ಸರ್ಕಾರದ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು, ಇದು ನಗರಗಳ ಸರ್ಕಾರವೂ ಅಥವಾ ಗ್ರಾಮಗಳ ಸರ್ಕಾರವೂ ಅಂತ ಕೆಲವರಿಗೆ ಅನುಮಾನವಿತ್ತು. ಆದರೂ ಅರ್ಥಿಕ ಶಿಸ್ತಿನಿಂದ ನಮ್ಮ ಸಕಾರ ಮುನ್ನಡೆಯುತ್ತಿದೆ ಮತ್ತು ದೇಶದ ಗೌರವವನ್ನು
ವಿಶ್ವದಲ್ಲಿ ಹೆಚ್ಚಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲ ದೇಶದ ಇನ್ನಿತರ ಭಾಗಗಳಲ್ಲೂ ಜನಾದೇಶ ಪಡೆದಿದ್ದೇವೆ ಎಂದು ಹೇಳಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವದು ನಮ್ಮ ಘೋಷ ವಾಕ್ಯ, ನಮ್ಮ ಸರ್ಕಾರದಲ್ಲಿ ಯಾವುದೇ ದ್ವಂದ್ವಗಳಿಲ್ಲ ಎಂದು ಹೇಳಿದರು. ದೇಶದ ಕಟ್ಟ ಕಡೆಯ ಗ್ರಾಮಕ್ಕೂ ನಾವು ವಿದ್ಯುತ್ ಮುಟ್ಟಿಸಿದ್ದೇವೆ, ಉಜ್ವಲ ಯೋಜನೆಯಡಿ ಬಡವರಿಗೆ ಗ್ಯಾಸ್ ಸಂಪರ್ಕ ಕಲ್ಪಸಿದ್ದೇವೆ, ಪ್ರಧಾನಿ ಮೋದಿಯವರ ಮಾತಿಗೆ ಬೆಲೆ ಕೊಟ್ಟು ಲಕ್ಷಾಂತರ ಜನರು ಸಬ್ಸಿಡಿ ತ್ಯಾಗ ಮಾಡಿದರು ಎಂದು ಅಮಿತ್ ಶಾ ಹೇಳಿದರು.
ನರೇಂದ್ರ ಮೋದಿಯವರ ಸಕಾರ ರ್ಯೆತರ ವಿರೋದಿ ಸರ್ಕಾರ ಮತ್ತು ಉಧ್ಯಮಿಗಳ ಪರವಿರುವ ಸರ್ಕಾರ ಎನ್ನುವ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ, ಅದರೆ ಅನ್ನದಾತರಿಗೆ ನಮ್ಮ ಸರ್ಕಾರ ಆನೇಕ ಯೋಜನೆಗಳನ್ನು ನೀಡಿದೆ ಎಂದು ಅಮಿತ್ ಶಾ ಹೇಳಿದರು.
ದೇಶದ 9 ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ, ಪ್ರಧಾನಿ ಮೋದಿ ದಿನಕ್ಕೆ 16 ಘಂಟೆ ಕೆಲಸ ಮಾಡುತ್ತಾರೆ, ಒಬ್ಬ ಪ್ರಾಮಾಣಿಕ ಮತ್ತು ಜನಪ್ರಿಯ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ನಿವೃತ್ತ ಯೋಧರಿಗಾಗಿ ಒನ್ ರ್ಯಾಂಕ್ ಒನ್ ಪೆನ್ಷನ್ ಜಾರಿಗೆ ತರಲಾಗಿದೆ, ಜಿಎಸ್ಟಿ ಮತ್ತು ನೋಟು ಅಮಾನ್ಯಿಕರಣ ಮೂಲಕ ಅರ್ಥಿಕ ಸುಧಾರಣೆ ಆಗಿದೆ ಎಂದು ಹೇಳಿದರು. ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ, ಹಿಂದಿನ ಯಾವ ಸರ್ಕಾರಗಳು ಮಾಡದ ಅಭಿವೃದ್ದಿಯನ್ನು ನಾವು ಮಾಡಿದ್ದೇವೆ ಎಂದು ಹೇಳಿದರು. ನಮ್ಮ ಸರ್ಕಾರವು ಕೃಷಿಗಾಗಿ ಬಜೆಟ್ನಲ್ಲಿ ಭಾರಿ ಮೊತ್ತವನ್ನು ಮೀಸಲಿಟ್ಟಿದೆ, ನಮ್ಮ ಸರ್ಕಾರ ರ್ಯೆತರ ಹಿತ ಕಾಪಾಡುವ ಸರ್ಕಾರ ಎಂದು ಹೇಳಿದರು.
ನಮ್ಮ ಸರ್ಕಾರ ಬಂದ ಮೇಲೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ, ಏಳು ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ಬಡವರಿಗಾಗಿ ಒಂದು ಕೋಟಿ ಮನೆ ನಿರ್ಮಿಸಿದ್ದೇವೆ, ಮೇಕ್ ಇನ್ ಇಂಡಿಯಾಗೆ ಪ್ರೊತ್ಸಾಹ ಕೊಟ್ಟಿದ್ದೇವೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದ್ದೇವೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಆಚರಿಸುವ ಮೂಲಕ ಜಗತ್ತಿನೆಲ್ಲಡೆ ನಮ್ಮ ಸಂಸ್ಕ್ರತಿ ಪರಿಚಯಿಸಿದ್ದೇವೆ ಎಂದು ಅಮಿತ್ ಶಾ ಹೇಳಿದರು.
ಮೊದಲು ವಂಶಪಾರಂಪರ್ಯ ಮತ್ತು ತುಷ್ಟೀಕರಣ ರಾಜ್ಯಭಾರವಿತ್ತು, ಅದರೆ ಮೋದಿಯವರು ಪ್ರಧಾನಿ ಮಂತ್ರಿಯಾದ ಮೇಲೆ ಸಾಕಷ್ಟು ಬದಲಾವಣೆಯಾಗಿದೆ ಎಂದು ಅಮಿತ್ ಶಾ ಹೇಳಿದರು. ಕೆಲವರು ಸುಳ್ಳು ಹೇಳುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ, ಅದರೆ ಮೋದಿ ಪ್ರಧಾನಿ ಮಂತ್ರಿಯಾದ ಮೇಲೆ ದೇಶದ ಚಿತ್ರಣವೇ ಬದಲಾಗಿದೆ, ಸರ್ಕಾರ ಬಡತನ ನಿರ್ಮೂಲನೆಗೆ ಸತತ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಉತ್ತಮ ಮಾರುಕಟ್ಟೆಗಳ ಮೂಲಕ ರ್ಯೆತರಿಗೆ ಆನುಕೂಲವಾಗಿದೆ, 2019ರ ಚುನಾವಣೆಯಲ್ಲಿ ಜನತೆ ನಮ್ಮ ಕೈ ಹಿಡಿಯಲಿದ್ದಾರೆ, ನಾವು ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ತ್ಯೆಲ ಬೆಲೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾಡಲಿದ್ದೇವೆ, ಗಡಿ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಅಮಿತ್ ಶಾ ಹೇಳಿದರು.
ಸುಳ್ಳನ್ನು ಹತ್ತು ಸಾರಿ ಹೇಳಿದರೂ ಅದು ನಿಜವಾಗುವುದಿಲ್ಲ, ಅದರೆ ಕೆಲವರು ಸುಳ್ಳು ಹೇಳುವುದನ್ನು ರಾಜನೀತಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಒಂದು ದೇಶ, ಒಂದೇ ಚುನಾವಣೆ ಚರ್ಚೆಯ ಹಂತದಲ್ಲಿದೆ, ಮಮತಾ ಬ್ಯಾನರ್ಜಿ ಮತ್ತು ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಲದಲ್ಲಿ ಪರಿಣಾಮ ಬೀರುವುದಿಲ್ಲ, ಅದೇ ರೀತಿ ಕುಮಾರಸ್ವಾಮಿ ಸೀತಾರಾಂ ಯೆಚ್ಚೂರಿ ಜೊತೆ ಮ್ಯೆತ್ರಿ ಮಾಡಿಕೊಂಡರೆ ಎಲ್ಲಿ ಪರಿಣಾಮ ಬೀರುತ್ತೆ ಎಂದು ಹೇಳಿದರು.
ಕೇವಲ ನೌಕರಿ ಮಾಡುವುದರಿಂದ ಜಿಡಿಪಿ ಬದಲಾವಣೆಯಾಗುವುದಿಲ್ಲ, ಅದೇ ಸ್ವಂತ ಉದ್ದಿಮೆ ಮಾಡಿದ್ರೇ ದೇಶದ ಆರ್ಥಿಕತೆಯೇ ಬದಲಾಗುತ್ತದೆ. ಸ್ವಂತ ಉದ್ದಿಮೆ ಮಾಡುವವರಿಗೆ ಮೋದಿ ಸರ್ಕಾರ ಬೆನ್ನೆಲುಬಾಗಿ ನಿಂತಿದೆ, ಮೋದಿ ಸರ್ಕಾರದ ವಿರುದ್ದ ಮಾಡುವ ಆರೋಪಗಳಿಗೆ ಬಹಿರಂಗ ಚರ್ಚೆಗೆ ಸಿದ್ದ, ಯಾವುದೇ ವೇದಿಕೆಯಲ್ಲಾದರೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿದರು. ಕರ್ನಾಟಕದಲ್ಲಿ 104 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದೇವೆ, ಈ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಪ್ರವೇಶವಾಗಿದೆ ಎಂದು ಅಮಿತ್ ಶಾ ಸುದ್ಧಿಗೋಷ್ಠಿಯಲ್ಲಿ ಹೇಳಿದರು.