
ಶ್ರೀನಗರ,ಮೇ 25
ಜಮ್ಮು ಮತ್ತು ಕಾಶ್ಮೀರದ ಕೆರನ್ ಪ್ರದೇಶದಿಂದ ದೇಶದೊಳಗೆ ನುಗ್ಗಲು ಯತ್ನಿಸಿದ ಉಗ್ರರನ್ನು ರಕ್ಷಣಾ ಪಡೆಗಳು ಹಿಮ್ಮೆಟ್ಟಿಸಿವೆ.
ಈ ಸಮಯದಲ್ಲಿ ನಡೆದ ಗುಂಡಿನ ಚಕಮಕಿಗೆ ಹೆದರಿ ಉಗ್ರರು ತಮ್ಮ ಕೆಲವು ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅವುಗಳಲ್ಲಿ ಮಡಚಬಹುದಾದ ಏಣಿಯೊಂದು ಸಿಕ್ಕಿದೆ.
ಈ ವಿಶಿಷ್ಠ ಏಣಿಯನ್ನು ಮಡಚಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮತ್ತೊಂದೆಡೆಗೆ ಒಯ್ಯಬಹುದಾಗಿದೆ. ಇಂತಹ ಏಣಿಗಳು ಸರಿಸುಮಾರು 15ರಿಂದ 20 ಅಡಿ ಉದ್ದವಿರುತ್ತವೆ. ಕಡಿಮೆ ತೂಕ, ಗಟ್ಟಿಮುಟ್ಟಾದ ಇವುಗಳನ್ನು ಗುಪ್ತವಾಗಿ ನುಸುಳಲು ಉಗ್ರರು ಬಳಸುತ್ತಿದ್ದಾರೆ. ಸಣ್ಣ ಹಳ್ಳ, ಗೋಡೆಗಳನ್ನು ದಾಟಲು, ಸಣ್ಣ ಬೆಟ್ಟಗಳನ್ನು ಬೇಗ ಹತ್ತಿಬಂದು ದಾಳಿ ನಡೆಸಿ ತ್ವರಿತವಾಗಿ ತಪ್ಪಿಸಿಕೊಳ್ಳಲು ಉಗ್ರರಿಗೆ ಇವು ನೆರವಾಗುತ್ತಿವೆ ಎನ್ನುತ್ತವೆ ಸೇನಾ ಮೂಲಗಳು.