ಜಮ್ಮು, ಮೇ 23-ಕಣಿವೆ ರಾಜ್ಯ ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಪಾಕಿಸ್ತಾನಿ ಸೇನಾಪಡೆ ಉದ್ಧಟತನ ಮುಂದುವರಿದಿದೆ. ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳ ಐಬಿ ಸಮೀಪದ ಭಾರತೀಯ ಗ್ರಾಮಗಳು ಹಾಗೂ ಗಡಿ ಠಾಣ್ಯಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಯೋಧರು ನಡೆಸಿದ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ಈ ಮೂರು ಜಿಲ್ಲೆಗಳ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಪಾಕಿಸ್ತಾನಿ ರೇಂಜರ್ಗಳು ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಳಿ ಇಂದು ಒಂಭತ್ತನೆ ದಿನಕ್ಕೆ ಕಾಲಿಟ್ಟಿದೆ. ಪಾಕ್ ದಾಳಿಗೆ ಭಾರತೀಯ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳ ನಾಗರಿಕ ಪ್ರದೇಶಗಳು ಹಾಗೂ ಗಡಿ ಔಟ್ ಪೆÇೀಸ್ಟ್ಗಳ ಮೇಲೆ ಪಾಕಿಸ್ತಾನಿ ಯೋಧರು ಇಂದು ಮುಂಜಾನೆಯಿಂದಲೇ ನಿರಂತರ ಗುಂಡಿನ ದಾಳಿ ನಡೆಸಿ ಷೆಲ್ಗಳನ್ನು ಹಾರಿಸುತ್ತಿದ್ದಾರೆ.
ಪಾಕ್ ಪುಂಡಾಟಕ್ಕೆ ನಾಲ್ವರು ನಾಗರಿಕರು ಸಾವಿಗೀಡಾಗಿದ್ದು, 10 ಜನರು ಗಾಯಗೊಂಡಿದ್ದಾರೆ. ಷೆಲ್ ದಾಳಿಯಿಂದಾಗಿ ಗ್ರಾಮಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದ ದಾಳಿಯಿಂದ ಬಾಧಿತರಾದ 100ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.