ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ: ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆ

ವಾಷಿಂಗ್ಟನ್, ಮೇ 23-ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿರುವ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ತಕರಾರನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವ ಬ್ಯಾಂಕ್ ಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ 330 ಮೆಗಾ ವ್ಯಾಟ್ ಸಾಮಥ್ರ್ಯದ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ವಿರುದ್ಧ ಪಾಕಿಸ್ತಾನದ ಅಟಾರ್ನಿ ಜನರಲ್ ಅಶ್ತಾರ್ ಔಸಪ್ ಅಲಿ ನೇತೃತ್ವದ ನಿಯೋಗ ವಾಷಿಂಗ್ಟನ್‍ಗೆ ತೆರಳಿ ವಿಶ್ವಬ್ಯಾಂಕ್‍ಗೆ ದೂರು ನೀಡಿತ್ತು. ಭಾರತದ ಈ ಕ್ರಮವು 1960ರ ಸಿಂಧು ಜಲ ಒಪ್ಪಂದದ ಉಲ್ಲಂಘನೆಯಾಗಿದೆ. ಈ ಯೋಜನೆಯಿಂದ ಪಾಕಿಸ್ತಾನಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ದೂರಿನಲ್ಲಿ ತಿಳಿಸಿತ್ತು.
ಪಾಕಿಸ್ತಾನದ ಅಹವಾಲು ಆಲಿಸಿ, ಒಪ್ಪಂದದ ವ್ಯಾಪ್ತಿಯೊಳಗೆ ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಅವಕಾಶಗಳ ಬಗ್ಗೆ ವಿಶ್ವಬ್ಯಾಂಕ್ ಒಲವು ತೋರಿ, ಮಾತುಕತೆ ನಡೆಸಿತ್ತು. ಆದರೆ ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಮಾತುಕತೆ ವಿಫಲವಾಗಿದೆ.
ವಿಶ್ವ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ದಕ್ಷಿಣ ಏಷ್ಯಾ ವಿಭಾಗದ ಉನ್ನತಾಧಿಕಾರಿಗಳೊಂದಿಗೆ ನಡೆದ ಮಾತುಕತೆ ವೇಳೆ ಪಾಕಿಸ್ತಾನವು ಏಕಪಕ್ಷೀಯ ವಾದವನ್ನು ಮಂಡಿಸಿದ್ದರಿಂದ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ಸಭೆ ವಿಫಲವಾಗಿದೆ.
ಭಾರತದ ಈ ಕ್ರಮವು 1960ರ ಸಿಂಧು ಜಲ ಒಪ್ಪಂದದ ಉಲ್ಲಂಘನೆಯಾಗಿದೆ. ಈ ಯೋಜನೆಯಿಂದ ಪಾಕಿಸ್ತಾನಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ದೂರಿನಲ್ಲಿ ತಿಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ