
ಹೈದರಾಬಾದ್;ಮೇ-23: ಕೇಂದ್ರ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಂಡಾರು ದತ್ತಾತ್ರೇಯ ಅವರ ಪುತ್ರ ವೈಷ್ಣವ್ ಅವರು ಹೃದಯಾಘಾತದಿಂದ ನಿಧನಹೊಂದಿದ್ದಾರೆ.
21 ವರ್ಷದ ವೈಷ್ಣವ್ ಕಳೆದ ರಾತ್ರಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ವೈಷ್ಣವ್ ಅವರನ್ನು ಸಿಖಂದರಾಬಾದಿನ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೈಷ್ಣವ್ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ವೈಷ್ಣವ್ ಅವರು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ವೈಷ್ಣವ್ ಅವರ ಅಕಾಲಿಕ ಮರಣ ಹಿನ್ನಲೆಯಲ್ಲಿ ಬಂಡಾರು ದತ್ತಾತ್ರೇಯ ಮನೆಯಲ್ಲಿ ನೀದುಃಖ ಮಡುಗಟ್ಟಿದೆ.