
ಕೌಲಲಂಪೂರ್, ಮೇ 22- ಭಾರತ ಮೂಲದ ಸಿಖ್ ರಾಜಕಾರಣಿ ಗೋವಿಂದ್ ಸಿಂಗ್ ದೇವೊ, ಮಲೇಷ್ಯಾದ ಸಂಪುಟ ಸಚಿವರಾಗಿ ನೇಮಕಗೊಂಡಿದ್ದಾರೆ.
ದೇಶದ ರಾಜಕೀಯ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯದ (ಸಿಖ್ ಜನಾಂಗ) ವ್ಯಕ್ತಿಯೊಬ್ಬರು ಸಚಿವರಾಗಿ ನೇಮಕಗೊಂಡಿರುವುದು ಇದೇ ಮೊದಲು.
ಗೋವಿಂದ್ ಸಿಂಗ್(45) ಅವರಿಗೆ ಹೊಸ ಸರ್ಕಾರದಲ್ಲಿ ಸಂವಹನ ಮತ್ತು ಮಲ್ಟಿಮೀಡಿಯಾ ಖಾತೆ ನೀಡಲಾಗಿದೆ. ಮಲೇಷ್ಯಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇವರು ಪ್ರಚೋಂಗ್ ಕ್ಷೇತ್ರದಿಂದ ಚುನಾಯಿತರಾಗಿದ್ದರು.