ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಪುಂಡಾಟ:

ಜಮ್ಮು, ಮೇ 22-ಕಣಿವೆ ರಾಜ್ಯ ಕಾಶ್ಮೀರದ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಇಂದು ಕೂಡ ಪಾಕಿಸ್ತಾನಿ ಸೈನಿಕರ ಪುಂಡಾಟ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ ಪಾಕ್ ರೇಂಜರ್‍ಗಳು ಕೆಲವರನ್ನು ಗಾಯಗೊಳಿಸಿದ್ದಾರೆ.
ಸಾಂಬಾ ಮತ್ತು ಅಖ್ನೂರ್ ವಲಯಗಳಲ್ಲಿ ಇಂದು ಮುಂಜಾನೆ ಪಾಕ್ ಯೋಧರು ಗುಂಡಿನ ದಾಳಿಗಳನ್ನು ನಡೆಸಿ ಮಾರ್ಟರ್‍ಗಳನ್ನು ಉಡಾಯಿಸಿದರು. ಈ ದಾಳಿಯಲ್ಲಿ 70 ವರ್ಷದ ವೃದ್ಧೆ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ. ಭಯಭೀತರಾದ ಗ್ರಾಮಸ್ಥರು ಸರ್ಕಾರ ನಡೆಸುತ್ತಿರುವ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ