ಭೂಪಾಲ್,ಮೇ 21-ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದಲ್ಲಿರುವ ಬಾಲಿವುಡ್ನ ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್ರವರ ಪೂರ್ವಿಕರ ಮನೆಯನ್ನು ಬರೋಬ್ಬರಿ 14 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿದೆ.
7,200 ಚದರಡಿ ವಿಸ್ತೀರ್ಣದ ನಿವಾಸವನ್ನು ಪ್ರತಿ ಚದರಡಿಗೆ 20 ಸಾವಿರ ರೂ. ಗಳಂತೆ ಮುಂಬೈ ಮೂಲದ ಬಿಲ್ಡರ್ ಅಭಯ್ ಜೈನ್ ಎಂಬವರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕಿಶೋರ್ ಕುಮಾರ್ ಅವರ ನಿವಾಸವನ್ನು ವಶಕ್ಕೆ ಪಡೆಯಬೇಕು. ಅವರ ಸ್ಮರಣಾರ್ಥ ಅಲ್ಲಿ ಮ್ಯೂಸಿಯಂ ನಿರ್ಮಿಸಬೇಕೆಂದು ಅವರ ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.