ವಿಶ್ವಾಸ ಮತ – ಬಿಜೆಪಿ ಆತ್ಮ ವಿಶ್ವಾಸ

ವಿಶ್ವಾಸ ಮತ – ಬಿಜೆಪಿ ಆತ್ಮ ವಿಶ್ವಾಸ

ನವದೆಹಲಿ, ಮೇ18- ವಿಶ್ವಾಸ ಮತ ಯಾಚನೆಗೆ ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್ ಮೇ 19ರಂದೆ (ನಾಳೆ) ಬಹುಮತ ಸಾಬೀತು ಪಡಿಸುವಂತೆ ತಾಕೀತು ಮಾಡಿದೆ. ಈ ಮೂಲಕ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.ಈ ಮಧ್ಯೆ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಸಾಮಾಜಿಕ ತಾಣಗಳಲ್ಲಿ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಗಳಿಸಿ ಬಹುಮತಕ್ಕೆ ತಕ್ಕಷ್ಟು ಶಾಸಕರ ಸಂಖ್ಯಾಬಲ ಇಲ್ಲದೆ ಇರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರ ಕ್ರಮವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಾ.ಜಿ.ಪರಮೇಶ್ವರ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿ ಸುಪ್ರೀಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
ನಿನ್ನೆ ತಡರಾತ್ರಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಆದರೆ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿ ಐತಿಹಾಸಿಕ ನಿರ್ಣಯವನ್ನು ಪ್ರಕಟಿಸಿದ್ದಾರೆ.
ತೀರ್ಪೀನಲ್ಲಿರುವ ಪ್ರಮುಖ ಅಂಶಗಳು:
ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ನಾಳೆ (ಮೇ 19)ಯೇ ವಿಶ್ವಾಸ ಮತ ಯಾಚನೆ ಮಾಡಬೇಕು.
ಬಹುಮತ ಸಾಬೀತಗಾಗುವವರೆಗೂ ಸರ್ಕಾರದಲ್ಲಿ ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳಬಾರದು.
ವಿಶ್ವಾಸಮತ ಯಾಚನೆಗೂ ಮೊದಲು ಹಂಗಾಮಿ ಸ್ಪೀಕರ್ ನೇಮಿಸಬೇಕು.
ಬಹುಮತ ಸಾಬೀತಾಗುವವರೆಗೂ ಯಾವುದೇ ಶಾಸಕರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಬಾರದು ಎಂದು ನಾಲ್ಕು ಪ್ರಮುಖ ಅಂಗಳ ತೀರ್ಪನ್ನು ನೀಡಿತ್ತು.
ವಿಶ್ವಾಸಮತ ಯಾಚನೆ ಸದನದ ನಿಯಮಾವಳಿಗಳ ಅನುಸಾರವೇ ನಡೆಯಬೇಕು. ನಿಯಮಬಾಹಿರವಾಗಿ ಯಾವ ಪ್ರಕ್ರಿಯೆಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಬಹುಮತ ಸಾಬೀತು ಪಡಿಸಲು ಕಾಲಾವಕಾಶ ನೀಡಬೇಕು ಮತ್ತು ವಿಶ್ವಾಸ ಮತಯಾಚನೆಯಲ್ಲಿ ರಹಸ್ಯ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಬಿಜೆಪಿ ಪರ ವಕೀಲರು ಮನವಿ ಮಾಡಿದಾಗ ಸುಪ್ರೀಂಕೋರ್ಟ್ ಮನವಿಯನ್ನು ತಳ್ಳಿ ಹಾಕಿದೆ. ನಾಳೆಯೇ ಬಹುಮತ ಸಾಬೀತು ಪಡಿಸಬೇಕು ಮತ್ತು ಬಹಿರಂಗ ಮತದಾನದ ಮೂಲಕವೇ ವಿಶ್ವಾಸಮತ ಸಾಬೀತಾಗಬೇಕು ಎಂದು ಸ್ಪಷ್ಟ ಪಡಿಸಿದೆ.
ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಶಾಸಕರಿಗೆ ನಿರ್ಬೀತ ವಾತವರಣ ನಿರ್ಮಿಸಬೇಕು. ಎಲ್ಲಾ ಶಾಸಕರಿಗೂ ಸೂಕ್ತ ಭದ್ರತೆ ನೀಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಭಾರೀ ವಾಗ್ವಾದ:
ಇದಕ್ಕೂ ಮುನ್ನ ಸುಪ್ರೀಂಕೋರ್ಟ್‍ನಲ್ಲಿ ಇಂದು ಬೆಳಗ್ಗೆ 10.30ರಿಂದ ಎರಡು ಕಡೆ ಕಾವೇರಿದ ಚರ್ಚೆ ನಡೆಯಿತು. ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ಬಿಜೆಪಿ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಸಮರ್ಥ ವಾದ ಮಂಡಿಸಿದರು.
ಯಾವುದೇ ಒಂದು ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ರಾಜ್ಯಪಾಲರು ತಮಗಿರುವ ಪರಮಾಧಿಕಾರವನ್ನು ಬಳಸಿಕೊಂಡು ಸರ್ಕಾರ ರಚಿಸಲು ಆಹ್ವಾನ ನೀಡುವುದು ಸರಿ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ನಮಗೆ ಸರ್ಕಾರ ರಚಿಸಲು ಬೇಕಾದ ಬಹುಮತವಿದೆ. ಅಗತ್ಯವಿರುವ ಶಾಸಕರನ್ನು ಹೇಗೆ ಹೊಂದಿಸಿಕೊಳ್ಳುತ್ತೇವೆ ಎಂಬುದು ಗೌಪ್ಯವಾದ ವಿಷಯ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್, ಜೆಡಿಎಸ್ ಚುನಾವಣೆಗೂ ಮುನ್ನ ವಿರುದ್ಧ ದಿಕ್ಕಿನಲ್ಲಿದ್ದವರು. ಫಲಿತಾಂಶ ಬಂದ ಬಳಿಕ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಹೊರಟಿರುವುದು ಸಂವಿಧಾನ ವಿರೋಧಿ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ನಮಗೆ ಸರ್ಕಾರ ರಚಿಸಲು ಅಗತ್ಯವಾದ ಬೆಂಬಲವಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕಾಂಗ ಪಕ್ಷದ ನಾಯಕರೇ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಪತ್ರ ನೀಡಿದ್ದರೂ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಆಹ್ವಾನ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಮಯಾವಕಾಶ ನೀಡುವುದಿಲ್ಲ:
ಒಂದು ಹಂತದಲ್ಲಿ ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧರಿದ್ದೀರಾ ಎಂದು ಎರಡು ಕಡೆಯ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ, ನ್ಯಾಯಾಲಯ ಆದೇಶ ನೀಡಿದರೆ ನಾವು ನಾಳೆಯೇ ಸಿದ್ದ ಎಂದು ಒಪ್ಪಿಕೊಂಡರು.
ಆದರೆ ಇದಕ್ಕೆ ಮುಕುಲ್ ರೋಹ್ಟಗಿ ಆಕ್ಷೇಪಿಸಿ, ನಾಳೆ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ. ನ್ಯಾಯಾಲಯ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು. ಇದನ್ನು ನ್ಯಾಯಾಲಯ ಒಪ್ಪಿಕೊಳ್ಳದೆ ಯಾವುದೇ ಕಾರಣಕ್ಕೂ ಯಾರಿಗೂ ಸಮಯಾವಕಾಶ ನೀಡುವುದಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದ ಪರ, ವಿರೋಧವಿಲ್ಲ. ನಾಳೆ ಸದನದಲ್ಲಿ ಬಹುಮತ ಸಾಬೀತು ಮಾಡಲೇಬೇಕೆಂದು ಸೂಚಿಸಿದರು.
ಕಡೆ ಪಕ್ಷ ವಿಶ್ವಾಸ ಮತ ಯಾಚನೆ ವೇಳೆ ಗುಪ್ತ ಮತದಾನಕ್ಕಾದರೂ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಇದನ್ನೂ ಕೂಡ ನ್ಯಾಯಾಲಯ ಒಪ್ಪಲಿಲ್ಲ. ರಾಜ್ಯಪಾಲರ ತೀರ್ಮಾನ ಸರಿಯೇ ಅಥವಾ ತಪ್ಪೇ ಎಂಬುದನ್ನು ವಿಶ್ವಾಸ ಮತಯಾಚನೆಯ ನಂತರ ಹೇಳುವುದಾಗಿ ಪ್ರಕಟಿಸಿತು.

ಪಕ್ಷಗಳ ಬಲಾ ಬಲ
ಬಿಜೆಪಿ 104
ಕಾಂಗ್ರೆಸ್ 78
ಜೆಡಿಎಸ್ 37
ಬಿಎಸ್‍ಪಿ 01
ಪಕ್ಷೇತರ 02
ಒಟ್ಟು 222

ನಿನ್ನೆಯೇ ವಿಪ್ ಜಾರಿ
ಬೆಂಗಳೂರು, ಮೇ 18- ನಾಳೆಯೇ ವಿಶ್ವಾಸಮತಯಾಚನೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿದೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷದ ಶಾಸಕರಿಗೆ ಇಂದೇ ವಿಪ್ ಜಾರಿ ಮಾಡಿವೆ.
ಮೂರು ಪಕ್ಷಗಳಲ್ಲೂ ಶಾಸಕರನ್ನು ಕಾಯ್ದುಕೊಳ್ಳಲು ಹರ ಸಾಹಸ ಪಡುತ್ತಿವೆ. ಬಿಜೆಪಿ ತನ್ನ 104 ಶಾಸಕರನ್ನು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಇರಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರನ್ನು ಆಂಧ್ರ ಪ್ರದೇಶದ ಖಾಸಗಿ ರೆಸಾರ್ಟ್‍ನಲ್ಲಿ ಇರಿಸಲಾಗಿದೆ.
ಇಂದು ಸಂಜೆ ಕಾಂಗ್ರೆಸ್‍ನ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ರೆಸಾರ್ಟ್ ತೆರಳಿ ಕಾಂಗ್ರೆಸ್ ಶಾಸಕರನ್ನು ವೈಯಕ್ತಿಕವಾಗಿ ಸಮಾಲೋಚನೆ ನಡೆಸಿದರು.
ಸಂಖ್ಯಾಬಲದ ಲೆಕ್ಕಾಚಾರ:
ಸದಸ್ಯರ ಬಲದಲ್ಲಿ ಬಹುಮತ ಪಡೆಯಲು 112 ಸದಸ್ಯರ ವಿಶ್ವಾಸ ಪಡೆಯಬೇಕಾಗಿದೆ.
ಕಾಂಗ್ರೆಸ್-ಜೆಡಿಎಸ್, ಪಕ್ಷೇತರ, ಬಿಎಸ್‍ಪಿ ಮೈತ್ರಿ ಸಂಖ್ಯೆ 117 ಆಗುತ್ತದೆ. ಬಿಜೆಪಿಯ ಸಂಖ್ಯೆ 104 ಇದೆ. ಬಿಜೆಪಿ ನಾಳಿನ ವಿಶ್ವಾಸಮತದಲ್ಲಿ ಗೆಲುವು ಸಾಧಿಸಬೇಕಾದರೆ 112 ಸದಸ್ಯರ ಬೆಂಬಲ ಪಡೆಯಬೇಕು.
ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಎರಡು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಅವರು ಒಂದೇ ಮತ ಚಲಾಯಿಸಬೇಕು. ಆಗ ಸದಸ್ಯರ ಬಲ 221 ಆಗುತ್ತದೆ. ಬಹುಮತ ಸಾಬೀತಿಗೆ ಮ್ಯಾಜಿಕ್ ನಂಬಂರ್ 112 ಪಡೆಯಬೇಕಾಗಿದೆ.
ಕಾಂಗ್ರೆಸ್‍ನಲ್ಲಿ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಇಬ್ಬರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿಲ್ಲ. ಬದಲಾಗಿ ಮುಳಬಾಗಿಲಿನಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿರುವ ಎಚ್.ನಾಗೇಶ್, ರಾಣೆ ಬೆನ್ನೂರಿನಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿರುವ ಆರ್.ಶಂಕರ್ ಕಾಂಗ್ರೆಸ್ ಜೊತೆಯಲ್ಲಿದ್ದಾರೆ.
ಜೆಡಿಎಸ್‍ನಲ್ಲಿ ಎಲ್ಲಾ ಶಾಸಕರು ಒಟ್ಟಾಗಿದ್ದಾರೆ ಎನ್ನಲಾಗಿದೆ. ಇನ್ನೂ ಬಿಜೆಪಿಯಲ್ಲಿ ಎಲ್ಲಾ ಶಾಸಕರು ಒಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್-ಜೆಡಿಎಸ್‍ನ ಕೆಲ ಶಾಸಕರು ಬಿಜೆಪಿ ನಾಯಕರ ಸಂಪರ್ಕದಲ್ಲಿರುವಂತೆ, ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್-ಜೆಡಿಎಸ್ ನಾಯಕರ ಸಂಪರ್ಕರಲ್ಲಿರುವುದು, ತೆರೆ ಮರೆಯಲ್ಲಿ ವಿವಿಧ ರಾಜಕೀಯ ಬೆಳವಣಿಗಳು ನಡೆಯುತ್ತಿರುವುದು ಕುತುಹಲ ಕೆರಳಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನಾಳೆ 4 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ