
ನವದೆಹಲಿ, ಮೇ 11-ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುವ ಬಿಜೆಪಿ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಸರಿ ಪಕ್ಷವು ತನ್ನ ಟೊಳ್ಳು ವಿಜಯೋತ್ಸವ ಆಚರಿಸುತ್ತಿದ್ದರೆ, ಭಾರತವು ಪ್ರಜಾಪ್ರಭುತ್ವ ಸೋಲಿನ ದುಃಖದಲ್ಲಿದೆ ಎಂದು ವಿಷಾದಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಸರ್ಕಾರ ರಚನೆಗೆ ಸಾಕಷ್ಟು ಸಂಖ್ಯಾ ಬಲ ಇಲ್ಲ. ಆದರೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ಧಾರೆ. ಇದು ನಮ್ಮ ಪವಿತ್ರ ಸಂವಿಧಾನವನ್ನೇ ಅಪಹಾಸ್ಯ ಮಾಡುವಂತಿದೆ ಎಂದು ರಾಹುಲ್ ಟ್ವಿಟ್ ಮಾಡಿದ್ದಾರೆ.
ಬಿಜೆಪಿ ಇದು ಪೆÇಳ್ಳು ವಿಜಯದ ಸಂಭ್ರಮವಾದರೆ, ದೇಶದ ಜನತೆಗೆ ಪ್ರಜಾತಂತ್ರ ವ್ಯವಸ್ಥೆ ಸೋತ ದುಃಖ ಎಂದು ಅವರು ಬಣ್ಣಿಸಿದರು.